ಅಜೆಕಾರು: ಅಜೆಕಾರು ಶ್ರೀ ಪ್ರಗತಿ ಗಣೇಶ್ ಟ್ರೇಡ್ ಸೆಂಟರ್ನಲ್ಲಿ ನೂತನವಾಗಿ ನಿರ್ಮಿಸಿರುವ ಸುಧಾಣ್ಣ ರೆಸಿಡೆನ್ಸಿ ಫ್ಯಾಮಿಲಿ ರೆಸ್ಟೋರೆಂಟ್ ಎಲ್ಲಾ ಆಧುನಿಕ ಸೌಲಭ್ಯದೊಂದಿಗೆ ಸೋಮವಾರ ಶುಭಾರಂಭಗೊಂಡಿತು.
ಮುಂಬಯಿ ಉದ್ಯಮಿ ದೇವಸ್ಯ ಶಿವರಾಮ ಶೆಟ್ಟಿ ರೆಸ್ಟೋರೆಂಟ್ನ್ನು ಉದ್ಘಾಟಿಸಿದರು. ಈ ಸಂದರ್ಭ ಮುನಿಯಾಲು ಬೈಲು ದಿವಾಕರ ಶೆಟ್ಟಿ, ಸಿರಿಯಣ್ಣ ಶೆಟ್ಟಿ ಹಿರ್ಗಾನ, ಶಂಕರ್ ಶೆಟ್ಟಿ ಮುನಿಯಾಲ್, ಉದ್ಯಮಿ ಮಂಜುನಾಥ್ ಕಾಡುಹೊಳೆ, ಚಂದ್ರಶೇಖರ ಮಾಡ ಬೈಲೂರು, ರಾಮಕೃಷ್ಣ ಶೆಟ್ಟಿ ಬೈಲೂರು, ಶ್ರೀಧರ ಶೆಟ್ಟಿ ಜಾರ್ಕಳ, ಪ್ರಸಾದ್ ಬಲ್ಲಾಳ್ ಹೆಬ್ರಿ, ರಾಜೇಶ್ ಶೆಟ್ಟಿ ಜಾರ್ಕಳ, ಶಿವಾನಂದ ಕಾಮತ್ ಹೆಬ್ರಿ, ಪೃಥ್ವಿರಾಜ್ ಹೆಗ್ಡೆ ಆತ್ರಾಡಿ ಮುನಿಯಾಲು, ಸುಮಿತ್ರಾ ಶೆಟ್ಟಿ ಮುನಿಯಾಲು, ಶಶಿರೇಖಾ ಶೆಟ್ಟಿ ಮುನಿಯಾಲು, ವಿನೋಧ ಶೆಟ್ಟಿ, ಲತಾ ಶೆಟ್ಟಿ, ಪ್ರೀಯ ಶೆಟ್ಟಿ, ಡಾ.ರಕ್ಷಿತಾ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಅತ್ಯಾಧುನಿಕ ವಿನ್ಯಾಸದ ಸಂಕೀರ್ಣವು ಸಕಲ ಮೂಲ ಸೌಲಭ್ಯಗಳನ್ನು ಒಳಗೊಂಡು ಆಕರ್ಷಕ ವಿನ್ಯಾಸವನ್ನು ಹೊಂದಿದೆ. ರಾಯಲ್ ಗ್ರ್ಯಾಂಡ್ ಹವಾನಿಯಂತ್ರಿತ ಫ್ಯಾಮಿಲಿ ರೆಸ್ಟೋರೆಂಟ್, ರಾಯಲ್ ಕಂಪರ್ಟ್ ಕ್ಯಾಬಿನ್ಗಳುಳ್ಳ ರೆಸ್ಟೋರೆಂಟ್, ರಾಯಲ್ ಗಾರ್ಡನ್ ಫ್ಯಾಮಿಲಿ ರೆಸ್ಟೋರೆಂಟ್, ಓಪನ್ ಟೇರೇಸ್ ಪೂಲ್ಸೈಡ್ ರೆಸ್ಟೋರೆಂಟ್ 50, 100, 200, 500, 1000 ಆಸನಗಳುಳ್ಳ ರಾಯಲ್ ಗಾರ್ಡನ್ ಅನ್ನು ಒಳಗೊಂಡಿದೆ.
ಮಿಲನ್ ಮಿನಿ, ಓಪನ್ ಟೇರೇಸ್, ಕೆಮ್ಮಂಜ, ಹಾಗೂ ಮಿಲನ್ ಮಲ್ಟಿಪರ್ಪಸ್ ಹವಾನಿಯಂತ್ರಿತ ಹಾಲ್ಗಳು, ಎಲ್ಲಾ ಸೌಲಭ್ಯಗಳುಳ್ಳ ಹವಾನಿಯಂತ್ರಿತ 20 ವಸತಿ ಗೃಹ ಕೊಠಡಿಗಳು ಹಾಗೂ ಎಲ್ಲಾ ರೀತಿಯ ವಾಣಿಜ್ಯ ಮಳಿಗೆಗಳು ಗ್ರಾಹಕರ ಸೇವೆಗಾಗಿ ಇಲ್ಲಿ ದೊರೆಯಲಿದೆ ಎಂದು ಸಂಸ್ಥೆಯ ಪಾಲುದಾರರಾದ ಗುರುಪ್ರಸಾದ್ ಶೆಟ್ಟಿ ಹಾಗೂ ಸುಜಯ ಶೆಟ್ಟಿ ತಿಳಿಸಿದರು.