ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಅವರೊಂದಿಗೆ ಕೂತು ಮಾತಾಡುವ ಕಾರ್ಯಕ್ರಮ

ಉಡುಪಿ: ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಅವರೊಂದಿಗೆ ಕೂತು ಮಾತಾಡುವ ಕಾರ್ಯಕ್ರಮ ಭಾನುವಾರ ಉಡುಪಿ ಕುಂಜಿಬೆಟ್ಟುವಿನ ಅಂಶು ಮನೆಯಲ್ಲಿ ನಡೆಯಿತು.

ಸಂಸ್ಕೃತಿ ವಿಶ್ವಪ್ರತಿಷ್ಠಾನ ಉಡುಪಿ ಬೀಯಿಂಗ್ ಸೋಶಿಯಲ್ ಉಡುಪಿ ಸಹಯೋಗದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ ಅವರು ನಾಗೇಂದ್ರ ಪ್ರಸಾದ್ ದಂಪತಿಗಳನ್ನು ಗೌರವಿಸಿದರು.

ಸಮಾರಂಭದಲ್ಲಿ ಸಾಹಿತಿ ಕಾತ್ಯಾಯಿನಿ ಕುಂಜಿಬೆಟ್ಟು, ಉರಗ ತಜ್ಞ ಗುರುರಾಜ್ ಸನಿಲ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಗಿರೀಶ್ ತಂತ್ರಿ, ಸದಸ್ಯರಾದ ನಂದಾ ಪೇಟ್ಕರ್, ಮಹೇಶ್ ಮಲ್ಪೆ, ಪ್ರತಿಭಾ ಆಚಾರ್ಯ, ಶೃತಿ ಕಾಶಿ, ಶ್ರೀ ಲಕ್ಷ್ಮಿ ಆಚಾರ್ಯ, ನಮ್ರತಾ ಭಟ್ ,ಸ್ವಾತಿ ಶೆಣೈ, ರಾಮಾಂಜಿ , ಶ್ರೀನಿವಾಸ್, ಸಂಚಾಲಕ ರವಿರಾಜ್ ಎಚ್.ಪಿ, ಸಮುದ್ಯತಾ ತಂಡದ ಸದಸ್ಯರು ಉಪಸ್ಥಿತರಿದ್ದರು. ಬೀಯಿಂಗ್ ಸೋಶಿಯಲ್ ಮುಖ್ಯಸ್ಥ ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.