ಬೆಂಗಳೂರು: ಬ್ರಾಹ್ಮಣ ಸಮುದಾಯದ ಕುರಿತು ವಿವಾದಾತ್ಮಕ ದೃಶ್ಯಗಳು ಇದ್ದ ಹಿನ್ನೆಲೆಯಲ್ಲಿ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾಕ್ಕೆ ಸಮುದಾಯದವರಿಂದ ತೀವ್ರ ಪ್ರತಿಭಟನೆಯ ಬಿಸಿತಟ್ಟಿತ್ತು. ಇದೀಗ ಬ್ರಾಹ್ಮಣ ಸಮುದಾಯದ ಒತ್ತಾಯದ ಮೇರೆಗೆ ಪೊಗರು ಚಿತ್ರದಲ್ಲಿನ ವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ ಬಿದ್ದಿದೆ. ಈ ಮೂಲಕ ಪೊಗರು ಸಿನಿಮಾ ವಿವಾದ ಸುಖಾಂತ್ಯ ಕಂಡಿದೆ.
ಸದ್ಯ ಪೊಗರು ಸಿನಿಮಾ ನೋಡಿದ ಬ್ರಾಹ್ಮಣ ಸಭಾದ ಸದಸ್ಯರು ವಿವಾದಾತ್ಮಕ ಸೀನ್ಗಳಿಗೆ ಕತ್ತರಿ ಹಾಕಿರುವುದನ್ನು ಗಮನಿಸಿದ್ದಾರೆ. ಈ ಹಿಂದೆ, ನಿರ್ದೇಶಕ ನಂದಕಿಶೋರ್ ಮತ್ತು ಸಮುದಾಯದ ಸದಸ್ಯರ ಮಧ್ಯೆ ಮಾತುಕತೆ ನಡೆದಿತ್ತು. ಸದ್ಯ, ತಾಂತ್ರಿಕ ಕಾರಣದಿಂದ ಸಿನಿಮಾ ಒಂದು ದಿನ ತಡವಾಗಿ ಥಿಯೇಟರ್ನಲ್ಲಿ ಪ್ರದರ್ಶನವಾಗಬಹುದು. ಸೆನ್ಸಾರ್ ಮಂಡಳಿ ಮುಂದೆ ಮತ್ತೆ ಸಿನಿಮಾ ಕಳಿಸಲಾಗುತ್ತೆ. ಅನುಮತಿ ಸಿಕ್ಕ ನಂತರ ಹೊಸ ಪ್ರಿಂಟ್ನ ಪ್ರದರ್ಶನ ಆರಂಭಿಸುತ್ತೇವೆ ಎಂದು ಪೊಗರು ಚಿತ್ರತಂಡ ತಿಳಿಸಿದೆ.