ಪುತ್ತೂರು: ಧರ್ಮಸ್ಥಳ ಮೇಳದ ಹಿರಿಯ ಕಲಾವಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಯಕ್ಷರಂಗದ ಸಿಡಿಲಮರಿ ಖ್ಯಾತಿಯ ಡಾ. ಶ್ರೀಧರ ಭಂಡಾರಿ (73) ಪುತ್ತೂರು ಅವರು ನಿಧನರಾಗಿದ್ದಾರೆ.
ತಂದೆ ಸಂಘಟಕ, ಕಲಾವಿದ ದಿ. ಪುತ್ತೂರು ಶೀನಪ್ಪ ಭಂಡಾರಿ ಅವರಿಂದ ಯಕ್ಷಗಾನವನ್ನು ಅಭ್ಯಸಿಸಿದ್ದ ಶ್ರೀಧರ ಭಂಡಾರಿ ಅವರು, ನಂತರದಲ್ಲಿ ಕುರಿಯ ವಿಠ್ಠಲ ಶಾಸ್ತ್ರಿ, ಹೊಸಹಿತ್ಲು ಮಾಲಿಂಗ ಭಟ್ಟರು, ಕೆ.ಗೋವಿಂದ ಭಟ್ ಸೇರಿದಂತೆ ಹಲವರಿಂದ ಯಕ್ಷಗಾನ ಕಲೆಯನ್ನು ಕರಗತ ಮಾಡಿಕೊಂಡರು. ಸಂಘಟಕರೂ ಆಗಿದ್ದ ಅವರು ಸುಬ್ರಹ್ಮಣ್ಯ ಮೇಳ, ಪುತ್ತೂರು ಮೇಳಗಳನ್ನು ನಡೆಸಿದ್ದರು.
ಅಭಿಮನ್ಯು, ಬಭ್ರುವಾಹನ, ಕೃಷ್ಣ, ಭಾರ್ಗವ ಸೇರಿದಂತೆ ಹಲವು ಪಾತ್ರಗಳು ಅವರಿಗೆ ಹೆಸರು ತಂದುಕೊಟ್ಟಿದ್ದವು.












