ನಕಲಿ ಆಯುರ್ವೇದ ಔಷಧ ಮಾರಾಟ: ಆರು ಮಂದಿಯ ಬಂಧನ

ಬೆಂಗಳೂರು: ನಕಲಿ ಆಯುರ್ವೇದ ಔಷಧ ಮಾರಾಟ ಮಾಡುತ್ತಿದ್ದ ಆರು ಜನರ ತಂಡವನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.

ಸಂಜಿತ್, ಮಂಜುನಾಥ್, ಶಿವಲಿಂಗ, ರಮಾಕಾಂತ್, ಕಿಶನ್, ಕಲ್ಲೋಳಪ್ಪ ಬಂಧಿತ ಆರೋಪಿಗಳು. ಇವರಿಂದ ನಕಲಿ ಆಯುರ್ವೇಧಿಕ್ ಔಷಧಿ ಸೇರಿ 5 ಲಕ್ಷ ರೂ. ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರು ವಯೋ ಸಹಜ ಕಾಯಿಲೆಗಳಿಗೆ ಔಷಧ ಕೊಡುವ ಸೋಗಿನಲ್ಲಿ ಹಿರಿಯ ನಾಗರಿಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ಬಳಿಕ ಕಾಯಿಲೆ ವಾಸಿ ಮಾಡುವುದಾಗಿ ವೃದ್ಧರನ್ನು ನಂಬಿಸುತ್ತಿದ್ದರು. ಅಲ್ಲದೇ, ವಾಸಿಯಾಗದಿದ್ದಲ್ಲಿ ಹಣ ವಾಪಸ್ಸು ನೀಡುವ ಭರವಸೆ ನೀಡುತ್ತಿದ್ದರು ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.