ಉಡುಪಿ: ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನ ನೀಲಾವರದ ಬ್ರಹ್ಮಕಲಶೋತ್ಸವ ಸಂಭ್ರಮದ ಕುರಿತು ಉಡುಪಿ ಮೀಡಿಯಾ ನೆಟ್ವರ್ಕ್ ಉಡುಪಿXPRESS ಜಾಲತಾಣ ಪ್ರಕಟಿಸಿರುವ “ದುರ್ಗಾ ಭಗವತೀ” ವಿಶೇಷ ಸಂಚಿಕೆಯನ್ನು ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಮಂಗಳವಾರ ಅನಾವರಣಗೊಳಿಸಲಾಯಿತು.
ಮಹಿಷಮರ್ದಿನಿ ದೇವಸ್ಥಾನ ನೀಲಾವರದ ಅಧ್ಯಕ್ಷರಾದ ರಘುರಾಮ ಮಧ್ಯಸ್ಥ,ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ ಸಂಚಿಕೆಯನ್ನು ಅನಾವರಣಗೊಳಿಸಿ ಶುಭ ಹಾರೈಸಿದರು.
ಸಂಪಾದಕರಾದ ಪ್ರಸಾದ್ ಶೆಣೈ, ವ್ಯವಸ್ಥಾಪಕ ಸಂಪಾದಕರಾದ ಜೀವೇಂದ್ರ ಶೆಟ್ಟಿ ಗರ್ಡಾಡಿ, ಮಾರುಕಟ್ಟೆ ವಿಭಾಗದ ಸ್ವರೂಪ್ ಶ್ರೀಯನ್, ಅಶೋಕ್ ಆಚಾರ್ಯ ಕೊಂಡಾಡಿ ಉಪಸ್ಥಿತರಿದ್ದರು.