ಶಿರ್ವ: ಮಾನವ ಶರೀರವೇ ನಿಜವಾದ ಯೋಗ. ಅದನ್ನು ಸಮರ್ಪಕವಾದ ರೀತಿಯಲ್ಲಿ ಕಾಪಾಡಿಕೊಳ್ಳಬೇಕಾದುದು ಅತೀ ಅಗತ್ಯ. ಜೀವನ ಶೈಲಿಯಲ್ಲಿ ಉತ್ತಮ ಆಹಾರದೊಂದಿಗೆ ವ್ಯಾಯಾಮವನ್ನು ದಿನ ನಿತ್ಯ ರೂಢಿಸಿಕೊಂಡರೆ ದೇಹ ಸ್ವಸ್ಥವಾಗಿ ರೋಗದಿಂದ ಮುಕ್ತವಾಗಲು ಸಾಧ್ಯ ಎಂದು ಯೋಗಗುರು ರಂಜಿತ್ ಪುನರೂರು ಹೇಳಿದರು.
ಶಿರ್ವ ಸಂತ ಮೇರಿ ಕಾಲೇಜಿನ ದೈಹಿಕ ಸಾಮರ್ಥ್ಯ ಮತ್ತು ಯೋಗ ಕೋಶ-ಎನ್.ಸಿ.ಸಿ.ಯ ನೇತೃತ್ವದಲ್ಲಿ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಯೋಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಉತ್ತಮ ಸಮಾಜ ಸೇವಕ ರಾಜ್ಯ ಪ್ರಶಸ್ತಿ ಪಡೆದ ಶ್ರೀ ಪತಂಜಲಿ ಯೋಗ ಗುರುಗಳಾದ ಅನಂತರಾಯ್ ಶೆಣೈ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಪ್ರಾಂಶುಪಾಲ ಡಾ. ಹೆರಾಲ್ಡ್ ಐವನ್ ಮೋನಿಸ್ ಅಧ್ಯಕ್ಷತೆ ವಹಿಸಿದ್ದರು.
ಶ್ರೀಪತಂಜಲಿ ಯೋಗ ಗುರುಗಳಾದ ಅನಂತರಾಯ್ ಶೆಣೈ , ಶ್ರೀ ರಂಜಿತ್ ಪುನಾರ್, ಶ್ರೀ ಪ್ರಕಾಶ್ ಆಚಾರ್ಯ ಪ್ರಾತ್ಯಕ್ಷಿಕೆಯ ಮೂಲಕ ಯೋಗಾಸನ ಕಲಿಸಿಕೊಟ್ಟರು.
ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಲೆಪ್ಟಿನೆಂಟ್ ಕೆ. ಪ್ರವೀಣ್ ಕುಮಾರ್ ದೈಹಿಕ ಸಾಮರ್ಥ್ಯ ಮತ್ತು ಯೋಗ ಕೋಶ ಸಂಯೋಜಕ ಜೆಫ್ ಸನ್ನಿ ಡಿಸೋಜಾ, ವಿದ್ಯಾರ್ಥಿಗಳು, ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ಬಂಧುಗಳು ಉಪಸ್ಥಿತರಿದ್ದರು.
ದೀಪ್ತಿ ಮತ್ತು ಬಳಗದವರು ಪ್ರಾರ್ಥಿಸಿದರು. ನವ್ಯ ಆಚಾರ್ಯ ಸ್ವಾಗತಿಸಿದರು, ಶ್ರಾವ್ಯ ವಂದಿಸಿದರು, ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.