ಉಡುಪಿ: ನಾಳೆ ನಿವೇಶನದಾರರಿಂದ ಪ್ರತಿಭಟನೆ

udupixpress

ಉಡುಪಿ: ಉಡುಪಿ ನಗರಸಭೆ ಹಾಗೂ ಪ್ರಾಧಿಕಾರದ ವ್ಯಾಪ್ತಿಯ ಗ್ರಾಮಗಳಲ್ಲಿ ಹಲವಾರು ಕೃಷಿ ಭೂಮಿ ಹಿಡುವಳಿಗಳನ್ನು ಖರೀದಿಸಿ ಭೂ ಪರಿವರ್ತನೆ ಮಾಡಿ ವಸತಿ ಬಡಾವಣೆಗಳನ್ನು ಮಾರ್ಪಡಿಸಿದ್ದರು. ಇದರಿಂದ ಸುಮಾರು 20 ಸಾವಿರಕ್ಕೂ ಅಧಿಕ ಸಂತ್ರಸ್ತರು ಕಳೆದ ವರ್ಷಗಳಿಂದ ಒಂದಲ್ಲ ಒಂದು ಕಾನೂನು ತೊಡಕಿನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಖರೀದಿಸಿ ಜಾಗದಲ್ಲಿ ಮನೆ ಕಟ್ಟಲು ಅಥವಾ ಮಾರಾಟ ಮಾಡಲು ಅಸಾಧ್ಯವಾಗಿದ್ದು, ಇದನ್ನು ಪರಿಹರಿಸುವಂತೆ ಆಗ್ರಹಿಸಿ ಸಂತ್ರಸ್ತರು ಮಂಗಳವಾರ (ಫೆ.16) ಬೆಳಿಗ್ಗೆ 10.30ಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.