ಬ್ರಹ್ಮಾವರ: ಮಹಿಳೆಯ ಅನೈತಿಕ ಸಂಬಂಧ ಪ್ರಶ್ನಿಸಿದ ವ್ಯಕ್ತಿಯ ಬರ್ಬರ ಹತ್ಯೆ

ಬ್ರಹ್ಮಾವರ: ನೆರೆಮನೆಯ ಮಹಿಳೆಯ ಅನೈತಿಕ ಸಂಬಂಧದ ಬಗ್ಗೆ ಪ್ರಶ್ನಿಸಿದ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬ್ರಹ್ಮಾವರ ಕರ್ಜೆ ಗುಡ್ಡೆಯಂಗಡಿ ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ.

ಮೃತನನ್ನು ಕರ್ಜೆ ನವೀನ್ ನಾಯ್ಕ್ ಎಂದು ಗುರುತಿಸಲಾಗಿದೆ. ನವೀನ್ ನ ನೆರೆಮನೆಯ ಮಹಿಳೆಯ ಮನೆಗೆ ವ್ಯಕ್ತಿಯೊಬ್ಬ ಆಗಾಗ ಬರುತ್ತಿದ್ದು, ಅದನ್ನು ಈತ ಪ್ರಶ್ನಿಸಿದ್ದನು. ಇದರಿಂದ ಸಿಟ್ಟಿಗೆದ್ದ ಯುವಕ ನಿನ್ನೆ ರಾತ್ರಿ ಸ್ನೇಹಿತರೊಂದಿಗೆ ಬಂದು ನವೀನ್ ನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ನವೀನ್ ಮನೆಯವರು ಸಮಾರಂಭಕ್ಕೆ ತೆರಳಿದ್ದರು. ಇದೇ ವೇಳೆ ಮೂರ್ನಾಲ್ಕು ಮಂದಿ ಬಂದು ನವೀನ್ ನನ್ನು ಮನೆಯಿಂದ ಹೊರಗೆ ಕರೆದು ಹಲ್ಲೆ ನಡೆಸಿದ್ದಾರೆ. ಇದರಿಂದ ತೀವ್ರ ಗಾಯಗೊಂಡ ನವೀನ್ ಅಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.