ಉಡುಪಿ: ಜಗದ್ಗುರು ಶ್ರೀ ಮಧ್ವಾಚಾರ್ಯ ಸಂಸ್ಥಾನ ಶ್ರೀ ಸೋಸಲೆ ವ್ಯಾಸರಾಜ ಮಠಾಧೀಶ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರು ಇಂದು ಉಡುಪಿ ಶಿವಳ್ಳಿ ಗ್ರಾಮದ ಅತ್ಯಂತ ಪ್ರಾಚೀನ ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ದೇಗುಲದ ವರ್ಷಾವಧಿ ಉತ್ಸವದ ಹಿನ್ನೆಲೆಯಲ್ಲಿ ಆಗಮಿಸಿದ ಶ್ರೀಗಳು ಮಹಾಲಿಂಗೇಶ್ವರ ದೇವರಿಗೆ ಮಂಗಳಾರತಿ ಬೆಳಗಿದರು. ಬಳಿಕ ಶ್ರೀ ದೇವಳದ ವತಿಯಿಂದ ಅರ್ಪಿಸಲಾದ ಗುರುಪೂಜೆಯನ್ನು ಸ್ವೀಕರಿಸಿ ಶುಭಾನುಗ್ರಹ ಸಂದೇಶ ನೀಡಿ ಹರಸಿದರು.
ದೇವಳದ ವತಿಯಿಂದ ಶ್ರೀಗಳನ್ನು ಸಾಂಪ್ರದಾಯಿಕ ಗೌರವಗಳೊಂದಿಗೆ ಸ್ವಾಗತಿಸಲಾಯಿತು.
ಆಡಳಿತ ಮೊಕ್ತೇಸರ ಪಿ.ಎನ್. ಪ್ರಸನ್ನಕುಮಾರ್ ರಾವ್ ದಂಪತಿ ಗುರುಪೂಜೆಯನ್ನು ನೆರವೇರಿಸಿದರು. ಅರ್ಚಕ ಪ್ರದ್ಯುಮ್ನ ಭಟ್, ವುದ್ವಾನ್ ಗೋಪಾಲಾಚಾರ್ಯ , ಪ್ರಶಾಂತ ಭಟ್ ಹರಿಕೃಷ್ಣ ಶಿವತ್ತಾಯ, ಪಿ.ಎನ್. ರಾಘವೇಂದ್ರ ರಾವ್, ಪುಷ್ಪಾ ಆಚಾರ್ಯ, ಶಶಾಂಕ್, ರಾಘವೇಂದ್ರ ಭಟ್ ಶಂಕರ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಶ್ರೀ ಮಠದ ಭಕ್ತರಾದ ಶ್ರೀ ವಾಸುದೇವ ಭಟ್ ಪೆರಂಪಳ್ಳಿ ಅವರ ಮನೆಗೂ ಭೇಟಿ ನೀಡಿ ಗೋಪೂಜೆ, ವೇದ ಗೀತೆ, ಮಹಾಭಾರತ ತಾತ್ಪರ್ಯ ನಿರ್ಣಯ, ಉಪನಿಷತ್ತು ಶ್ರೀ ಭಾಗವತ ಮೊದಲಾದಿ ಗ್ರಂಥಗಳಿಗೆ ಮಂಗಳಾರತಿ ಬೆಳಗಿ, ಮನೆಯ ವತಿಯಿಂದ ನೀಡಲಾದ ಗುರುಪೂಜೆಯನ್ನು ಸ್ವೀಕರಿಸಿ ಅನುಗ್ರಹಿಸಿದರು. ರಾಘವೇಂದ್ರ ಭಟ್ ದಂಪತಿ ಬಾಲಕೃಷ್ಣ ಭಟ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.