ಮನೆಯಲ್ಲೇ ರೆಡಿಯಾಗೋ ಈ ಜೀರಾ ಸೋಡ, ಒಮ್ಮೆ ಕುಡಿದು ನೋಡಾ!

ಚಳಿಗಾಲ ಮುಗಿಯುವ ಹೊತ್ತು, ಬೇಸಿಗೆ ಸೂರ್ಯನ ಬಿಸಿಯಾದ ಝಳ ಮೈಯ ಸುಡುತ್ತಿದ್ದರೆ ಜನರೆಲ್ಲಾ ತಂಪು ಪಾನೀಯಗಳತ್ತ ಮುಖ ಮಾಡುತ್ತಿದ್ದಾರೆ . ಅದರಲ್ಲೂ ಕರಾವಳಿಯ ಬಿಸಿಲು ಮಾತ್ರ ಇನ್ನೂ ಹೆಚ್ಚಿನ ಉಷ್ಣತೆಗೆ ಕಾರಣವಾಗುತ್ತದೆ.

ಕೋಲ್ಡ್ ,ಪೆಪ್ಸಿ, ಕೋಕ್ ನಂತಹ ಕಾಲದಲ್ಲಿ ಇಲ್ಲೊಂದು ಸ್ಥಳಿಯ ಮಟ್ಟದ ಉತ್ಪನ್ನವೊಂದು ಸದ್ದಿಲ್ಲದೆ ಸುದ್ದಿ ಮಾಡುತ್ತಿದೆ. ಅದರ ಹೆಸರು ಅವನಿ ಸಾಫ್ಟ್ ಡ್ರಿಂಕ್ಸ್.
ಮನೆಯಲ್ಲೇ ತಯಾರಿಸುವ ಜೀರಾ ಸೋಡವಿದು.

ಉಡುಪಿ ಕೊಡವೂರು ರಸ್ತೆಯಲ್ಲಿರುವ ಮನೆಯಲ್ಲಿಯೆ ಕಳೆದ ಹದಿನೈದು ವರ್ಷಗಳಿಂದ ಅಮರನಾಥ್ ಅವರು ಪಾನೀಯ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದು ಜೀರಾ ಸೋಡ ತಯಾರಿಸಿ ಉಡುಪಿ ಉದ್ಯಾವರ ಸಂತೆಕಟ್ಟೆ ಮಲ್ಪೆ ಹಾಗೂ ಬೈಲೂರು ಪರಿಸರದಲ್ಲಿ ಮಾರುಕಟ್ಟೆ ಮಾಡುತ್ತಾರೆ.

ಜೀರಾ ಸೋಡ ಮಾತ್ರವಲ್ಲ, ಜಿಂಜರ್ ಸೋಡ ,ಗೋಲಿ ಸೋಡ, ಲಿಂಬು ಸೋಡ ,ಕೋಕಂ ಸೋಡವನ್ನು ಕೂಡ ಮಾಡುತ್ತಾರೆ.

ಅಮರ್ ನಾಥರ ಬಳಿ ಐದು ಜನರ ಪರಿಣತರ ತಂಡವಿದೆ . ಅದಕ್ಕೆ ಬೆನ್ನೆಲುಬಾಗಿ ನಿಂತವರು ಅವರ ತಂದೆ ಅಶೋಕ್ ಸುವರ್ಣ.

ಅಶೋಕ್ ಸುವರ್ಣರು ಸುಮಾರು ನಲವತ್ತೈದು ವರ್ಷಗಳ ಕಾಲ ಖಾಸಗಿ ಪಾನೀಯ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು. ಆದರೆ ತಾನು ಸ್ವಂತ ಉದ್ಯಮ ಮಾಡಬೇಕು ಎಂಬ ಉದ್ದೇಶವನ್ನು ಮನಗಂಡು ಅಮರ್ನಾಥ್ ಹಾಗು ಅಶೋಕ್ ಸುವರ್ಣ ಇಬ್ಬರು ಸೇರಿ ಅವನಿ ಸಾಪ್ಟ್ ಡ್ರಿಂಕ್ಸ್ ಹುಟ್ಟು ಹಾಕಿ ಮನೆಯಲ್ಲೇ ಜೀರಾ ಸೋಡ ತಯಾರಿಸಲು ಆರಂಭಿಸಿದರು.

ಇಂದು ಅನೇಕ ಉತ್ಪನ್ನಗಳ ಮೂಲಕ ಹೊಸತೊಂದು ‌ಅದ್ಯಾಯಕ್ಕೆ ಮುನ್ನುಡಿ ಬರೆದಿದೆ ಇವರ ಸಂಸ್ಥೆ.

ಜೀರಾ ಸೋಡ ಜಿಲ್ಲೆಯ ಯಂಗ್ ಹುಡುಗ
ಹುಡುಗಿಯರ ಪ್ಯಾವರೇಟ್ ಪಾನೀಯವಾಗಿದೆ.
ಇದನ್ನು ಕೇವಲ ಅಂಗಡಿಗಳಿಗೂ ಮಾತ್ರವಲ್ಲದೆ ಸಭೆ ಸಮಾರಂಭ ಗಳಿಗೂ ಪೂರೈಸುತ್ತಾರೆ. ನೀವೂ ಒಮ್ಮೆ ಜೀರಾ ಸೋಡದ ಟೇಸ್ಟ್ ನೋಡಿ.

ಸಂಪರ್ಕ ಸಂಖ್ಯೆ: 9844711234

-ರಾಮ್ ಅಜೆಕಾರ್