ಚಿಕ್ಕಮಗಳೂರು: ಅಪ್ರಾಪ್ತ ಬಾಲಕಿಯ ಮೇಲೆ 17 ಮಂದಿ ನಿರಂತರ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ನೀಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ 17 ಮಂದಿಯ ವಿರುದ್ಧ ದೂರು ದಾಖಲಾಗಿದೆ.
ಸ್ಮೈಲ್ ಅಭಿ ಮತ್ತು ಆತನ ಸ್ನೇಹಿತರಾದ ಗಿರೀಶ್ ಆನೆಗುಂದ, ವಿಕಾಸ್ ಹೊಳಿಕೊಪ್ಪ, ಮಣಿಕಂಠ ಹೊಳಿಕೊಪ್ಪ, ಸಂಪತ್ ನೆಮ್ಮಾರ್, ಅಶ್ವಥ್ ಗೌಡ ಶೃಂಗೇರಿ, ರಾಜೇಶ್ ಆನೆಗುಂದ, ಅಮಿತ್ ಆನೆಗುಂದ, ಸಂತೋಷ ಕುರುಬಗೆರೆ, ದೀಕ್ಷಿತ್ ಹೆಗ್ಗದ್ದೆ, ಸಂತೋಷ್ ಹೆರೂರು, ನಿರಂಜನ್ ಕಿಗ್ಗ, ನಯನ ಗೌಡ ಶೃಂಗೇರಿ, ಅಭೀಗೌಡ ಶೃಂಗೇರಿ, ಯೋಗೀಶ್ ಖಾಂಡ್ಯ ಎನ್ನುವವರು ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಇವರು ಬಾಲಕಿಗೆ ನಿರಂತರ ಅತ್ಯಾಚಾರ ನಡೆಸಿದ್ದಾರೆ.
ಇವರಿಗೆ ಬಾಲಕಿಯ ಚಿಕ್ಕಮ್ಮ ಗೀತಾ ಎಂಬಾಕೆ ಸಹಕಾರ ನೀಡಿದ್ದಾಳೆ ಎಂದು ಶೃಂಗೇರಿ ತಾಲೂಕು ಗೋಚವಳ್ಳಿ ಗ್ರಾಮದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಬ್ರಮಣ್ಯ ಎನ್ನುವವರು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.