ಹಿರಿಯಡಕ: ಗೆಳೆಯರ ಬಳಗ ಕಾಜಾರಗುತ್ತು ಕಳೆದ ಐದು ವರ್ಷಗಳಿಂದ ಅಶಕ್ತರಿಗೆ ನೆರವಾಗುತ್ತಿದೆ. ಇಂತಹ ಕಾರ್ಯ ಮುಂದಿನ ದಿನಗಳಲ್ಲೂ ಸಂಘದಿಂದ ನೆರವೇರಲಿ ಎಂದು ಕಾಜಾರಗುತ್ತು ಸ.ಹಿ.ಪ್ರಾ.ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ದೇವೇಂದ್ರ ನಾಯಕ್ ಮುತ್ತೂರು ಹೇಳಿದರು.
ಅವರು ಇಂದು ಗೆಳೆಯರ ಬಳಗ ಕಾಜಾರಗುತ್ತು ವತಿಯಿಂದ ಬಡ ವಿಶಿಷ್ಟ ಚೇತನ ಮಕ್ಕಳ ವೈದ್ಯಕೀಯ ನೆರವಿಗಾಗಿ ಹಾಗೂ ಶಾಲಾಭಿವೃದ್ಧಿ ನಿಧಿಗಾಗಿ ನಡೆಸುವ ಐದನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತಾಡಿದರು.
ಈ ಸಂದರ್ಭದಲ್ಲಿ ಕರಾಟೆ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಪ್ರತಿಭೆ ಸೌಂದರ್ಯ ಆರ್.ನಾಯಕ್ ಹಾಗೂ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಕಾರ್ಕಳದ ಕಾರ್ತಿಕ್ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ವಿಕಲಚೇತನರಾದ ಕಾಜಲ್ ಹಾಗೂ ಕಾರ್ತಿಕ್ ಅವರಿಗೆ ಸಂಘದ ಪರವಾಗಿ ಸಹಾಯಧನ ಹಾಗೂ ರೇಣುಕಾ ನಿತೀಶ್ ಕುಮಾರ್ ಅವರ ವತಿಯಿಂದ ಆಹಾರದ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಯಮಿ ಅನಿಲ್ ಶೆಟ್ಟಿ ಮಾಂಬೆಟ್ಟು, ಕೃಷಿಕ ಗುರುನಂದನ್, ಉದ್ಯಮಿ ಅನಿಲ್ ಶೆಟ್ಟಿ ಕಾಜಾರಗುತ್ತು, ಹರೀಶ್ ಶೆಟ್ಟಿ ಅಂಜಾರು ಕುವೈಟ್, ವಕೀಲೆ ವಿದ್ಯಾಲಕ್ಷ್ಮಿ ಆರ್.ಮೆಂಡನ್, ರೇಣುಕಾ ನಿತೀಶ್ ಕುಮಾರ್, ರವಿ ಪಾಣರ ಉಪಸ್ಥಿತರಿದ್ದರು. ತಿಲಕಾ ನಾಗರಾಜ್ ಸ್ವಾಗತಿಸಿ, ನಿರೂಪಿಸಿದರು.