ಉಡುಪಿ: ನರೆನ್ ಅಕಾಡೆಮಿ ಬ್ರಹ್ಮಾವರ ಇದರ ವತಿಯಿಂದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (ಎಸ್ಎಸ್ ಸಿ, ಐಬಿಪಿಎಸ್, ಆರ್ ಆರ್ ಬಿ, ಯುಪಿಎಸ್ ಸಿ, ಸಿ- ಸಿವಿಲ್ ಸರ್ವಿಸ್, ಎಫ್ ಡಿಎ ಹಾಗೂ ಇತರೆ ಪರೀಕ್ಷೆ) ಸಂಯೋಜಿತ (composite) ಆನ್ ಲೈನ್ ತರಬೇತಿ ಆಯೋಜಿಸಲಾಗಿದೆ.
ವಿದ್ಯಾರ್ಹತೆ: ಬಿ.ಎ., ಬಿ.ಕಾಂ., ಬಿ.ಎಸ್ಸಿ, ಬಿಸಿಎ, ಬಿಬಿಎಂ ಪದವಿ ಹಂತದಲ್ಲಿರುವ ಹಾಗೂ ಈಗಾಗಲೇ ಪದವಿ ಪಡೆದಿರುವ ಮತ್ತು ಸ್ನಾತಕೋತ್ತರ ಪದವಿ ಅಧ್ಯಯನದಲ್ಲಿರುವವರು ಈ ತರಬೇತಿಗೆ ಅರ್ಹರಾಗಿದ್ದಾರೆ.
ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿವಿ ಅಂಗೀಕರಿಸಿದ ಯಾವುದೇ ಪದವಿ ಪಡೆದಿರುವವರು ಈ ತರಬೇತಿ ಪಡೆಯಬಹುದಾಗಿದೆ. ಪದವಿ ಪಡೆದು ವಿವಿಧ ಉದ್ಯೋಗದಲ್ಲಿರುವ ಯುವಕ ಯುವತಿಯರು ದಿನದಲ್ಲಿ 1ರಿಂದ 2 ಗಂಟೆ ಅವಧಿ ಬಿಡುವು ಮಾಡಿಕೊಂಡಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬಹುದಾಗಿದೆ.
ತರಬೇತಿಯ ವಿಷಯ: ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ಇತಿಹಾಸ, polity, ಸಂವಿಧಾನ, ಗವರ್ನೆಸ್, ಜಿಯೋಗ್ರಫಿ, ಕನ್ನಡ ಭಾಷಾಜ್ಞಾನ ಹಾಗೂ ಪ್ರಚಲಿತ ವಿದ್ಯಮಾನ ವಿಷಯಗಳು ಒಳಗೊಂಡಿರುತ್ತವೆ.
ತರಬೇತಿ ವಿಧಾನ: ಆನ್ ಲೈನ್ ತರಬೇತಿ ಕೋರ್ಸ್ ನ ವಿಡಿಯೋಗಳನ್ನು ನಮ್ಮ ಸಂಸ್ಥೆಯ ವೆಬ್ ಸೈಟ್( www.narenacademy.com) ನಲ್ಲಿ ಅಪ್ ಲೋಡ್ ಮಾಡಲಾಗುತ್ತದೆ. ಅಭ್ಯರ್ಥಿಗಳು ತಮಗೆ ಅನುಕೂಲವಾಗುವ ಸಮಯದಲ್ಲಿ ವೀಕ್ಷಿಸಬಹುದು.
ನೋಂದಣಿ ವಿಧಾನ: ನಮ್ಮ ವೆಬ್ ಸೈಟ್ ನಲ್ಲಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿಕೊಂಡು ನಗದು ಅಥವಾ ಬ್ಯಾಂಕ್ ಖಾತೆಗೆ NEFT/RTGS ಮೂಲಕ ನೇಮಕಾತಿ ಶುಲ್ಕ ಸಂದಾಯ ಮಾಡಬೇಕು. ಆ ಬಳಿಕ ತರಬೇತಿ ವಿಡಿಯೋ ಲಭ್ಯವಾಗುತ್ತದೆ.
ನಮ್ಮ ಸಂಸ್ಥೆಯು ಸೋಶಿಯಲ್ ಎಂಟರ್ ಪೈಸಸ್ ನೆಲೆಯಲ್ಲಿ ಸಂಘಟಿತವಾಗಿದೆ. ಹಾಗಾಗಿ ಅತ್ಯಂತ ಕಡಿಮೆ ಶುಲ್ಕದಲ್ಲಿ ಅತ್ಯುತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಪಡೆದುಕೊಳ್ಳುವ ಅವಕಾಶ ನಿಮ್ಮದಾಗುತ್ತದೆ.
ಆನ್ ಲೈನ್ ತರಬೇತಿಯ ವಿವರ:
*ವಿದ್ಯಾರ್ಥಿಗಳು ಈ ತರಬೇತಿಗೆ ಯಾವುದೇ ತಿಂಗಳಲ್ಲಿ ಸೇರ್ಪಡೆಗೊಳ್ಳಬಹುದು.
*ತರಬೇತಿ ಅವಧಿ ಒಟ್ಟು 24 ವಾರಗಳು (ಆರು ತಿಂಗಳು)
*ಪ್ರತಿ ಶನಿವಾರ ಮತ್ತು ಭಾನುವಾರ ವಾರದಲ್ಲಿ ಎರಡು ದಿನ ಮಾತ್ರ.
*ವಾರದ ಎರಡು ದಿನದಲ್ಲಿ ಒಟ್ಟು ಆರು ತರಬೇತಿ ವಿಡಿಯೋಗಳು ಸಂಸ್ಥೆಯ ವೆಬ್ ಸೈಟ್ ನಲ್ಲಿ ಲಭ್ಯವಾಗಲಿದೆ.
*24 ವಾರದಲ್ಲಿ ಒಟ್ಟು 144 ತರಬೇತಿ ವಿಡಿಯೋಗಳು ದೊರೆಯಲಿದೆ.
*ನೋಂದಣಿ ಬಳಿಕ ಅಭ್ಯರ್ಥಿಗೆ ಐಡಿ ಹಾಗೂ ಪಾಸ್ ವಾರ್ಡ್ ಕಳುಹಿಸಲಾಗುತ್ತದೆ.
* ವಿಡಿಯೋಗಳು ಸ್ಪರ್ಧಾತ್ಮಕ ಪರೀಕ್ಷೆ ಸಂಬಂಧಿಸಿದ ವಿಷಯ ಒಳಗೊಂಡಿರುತ್ತದೆ.
*ಆನ್ ಲೈನ್ ತರಬೇತಿಯ ಪ್ರತಿ ವಿಷಯದ ವಿಡಿಯೋ ಸರಣಿ ಮುಗಿದ ಬಳಿಕ ಎರಡು ದಿನಗಳ ಕಾರ್ಯಾಗಾರ ನಡೆಸಲಾಗುತ್ತದೆ.
*ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಗುಂಪು ಚರ್ಚೆ, ಪ್ರಶ್ನೋತ್ತರ ಮಾಲಿಕೆ, ಕಿರುಪರೀಕ್ಷೆ ಹಾಗೂ ಪ್ರಸ್ತುತಿ ಒಳಗೊಂಡಿರುತ್ತದೆ.
*ಕಾರ್ಯಾಗಾರ ದಿನಾಂಕ ಹಾಗೂ ಸಮಯ, ವಿಷಯ ಸೂಚಿ ಈ ಎಲ್ಲಾ ಮಾಹಿತಿಗಳನ್ನು ಒಂದು ವಾರದ ಮೊದಲೇ ತಿಳಿಯಪಡಿಸಲಾಗುತ್ತದೆ.
ಸಂಸ್ಥೆಯು ಅತೀ ಶೀಘ್ರದಲ್ಲಿ ವಾರಾಂತ್ಯದ ಆಫ್ ಲೈನ್ ತರಬೇತಿ ಆರಂಭಿಸಲಿದೆ. ರೆಗ್ಯುಲರ್ ಬ್ಯಾಚ್ ಕೂಡ ಆರಂಭಿಸಲಿದೆ.
ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಮುಖ್ಯ ಕಚೇರಿ ಲಕ್ಷ್ಮೀ ಆರ್ಕೆಡ್, ಬ್ರಹ್ಮಾವರ ಅಥವಾ ಮೊಬೈಲ್ ಸಂಖ್ಯೆ 7337606807 ಸಂಪರ್ಕಿಸಬಹುದು.