ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನ: ಫೆ. 4ಕ್ಕೆ ‘ದೊಂದಿ ಬೆಳಕಿನ ಛಾಯಾಚಿತ್ರ ಸ್ಪರ್ಧೆ’

ಉಡುಪಿ: ಕೊಡವೂರು ಶ್ರೀ ಶಂಕರನಾರಾಯಣ ರಾಶಿಪೂಜೆ ಸೇವಾ ಸಮಿತಿ ಪ್ರಾಯೋಜಕತ್ವದಲ್ಲಿ ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಷಿಯೇಷನ್  ಉಡುಪಿ ವಲಯ ‘ದೊಂದಿ ಬೆಳಕಿನಲ್ಲಿ ನಡೆಯಲಿರುವ ರಾಶಿ ಪೂಜೆಗೆ ಛಾಯಾಚಿತ್ರ ಸ್ಪರ್ಧೆಯ ಸಾಂಗತ್ಯ -2021’ (ಈಶ ಸೇವೆಯೊಂದಿಗೆ ಕಲಾ ಸೇವೆ) ಅನ್ನು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಫೆಬ್ರವರಿ 4ರಂದು ಆಯೋಜಿಸಿದೆ.

ಅಂದು ದೇಗುಲದಲ್ಲಿ ದೊಂದಿ ಬೆಳಕಿನಲ್ಲಿ ನಡೆಯಲಿರುವ ರಾಶಿ ಪೂಜಾ ಮಹೋತ್ಸವದ ಚಿತ್ತಾಕರ್ಷಕ ದೃಶ್ಯಗಳನ್ನು ಛಾಯಾಗ್ರಾಹಕರು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದು ಸ್ಪರ್ಧೆಯಲ್ಲಿ ಭಾಗವಹಿಸಿ, ಬಹುಮಾನ ತಮ್ಮದಾಗಿಸಿ ಕೊಳ್ಳುವ ಅಪೂರ್ವ ಅವಕಾಶವೊಂದನ್ನು ಸಂಸ್ಥೆ ಕಲ್ಪಿಸಿದೆ.

ಬಹುಮಾನ:

ಪ್ರಥಮ 3 ಸಾವಿರ, ದ್ವಿತೀಯ 2 ಸಾವಿರ, ತೃತೀಯ 1 ಸಾವಿರ ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಲಾಗುವುದು. ಇದರೊಂದಿಗೆ ಎರಡು ಸಮಾಧಾನಕರ ಬಹುಮಾನವನ್ನು ನೀಡಲಾಗುವುದು.

ಸ್ವರ್ಧಾ ನಿಯಮ ಹಾಗೂ ನಿಬಂಧನೆಗಳು:
*ಒಬ್ಬರು 8*10 ಗಾತ್ರದ ಗರಿಷ್ಠ ಮೂರು ಛಾಯಾಚಿತ್ರಗಳನ್ನು ಕಳುಹಿಸಬಹುದು. *ಛಾಯಾಚಿತ್ರದ ಹಿಂಬದಿ ತಮ್ಮ ಹೆಸರು , ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.
*ಧಾರ್ಮಿಕ ವಿಧಿ ವಿಧಾನಗಳಿಗೆ ಯಾವುದೇ ಅಡಚಣೆಯಾಗದಂತೆ ಛಾಯಾಚಿತ್ರಗಳನ್ನು ತೆಗೆಯಬೇಕು.

*ಛಾಯಾಚಿತ್ರ ತೆಗೆಯುವ ಸಮಯ ಫೆ.4ರ ಸಂಜೆ 7ರಿಂದ ಫೆ. 5ರ ಬೆಳಿಗ್ಗೆ  6 ಗಂಟೆಯವರೆಗೆ ಮಾತ್ರ ದೊಂದಿ ಬೆಳಕಿನ ಅವಕಾಶವಿರಲಿದೆ.
*ನಿರ್ಣಾಯಕರ ತೀರ್ಮಾನವೇ ಅಂತಿಮ. ಎಲ್ಲರಿಗೂ ಮುಕ್ತ ಅವಕಾಶ.
*ಛಾಯಾಚಿತ್ರ ಕಳುಹಿಸಲು ಕೊನೆಯ ಫೆ. 15.
ಮೊಬೈಲ್ ನಲ್ಲಿ ತೆಗೆದ ಛಾಯಾಚಿತ್ರವನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.

*ಛಾಯಾಚಿತ್ರಗಳನ್ನು ಕಳುಹಿಸಬೇಕಾದ ವಿಳಾಸ-ಶಾಡೋಸ್ ಡಿಜಿಟಲ್ ಕ್ರಿಯೇಶನ್, ಕಸ್ತೂರಿ ಬಿಲ್ಡಿಂಗ್, ಎರಡನೇ ಮಹಡಿ ಶಿರಿಬೀಡು, ಉಡುಪಿ.
*ಬಹುಮಾನ ವಿತರಣೆ ಫೆ. 21ರಂದು ಶ್ರೀದೇವಳದ ಆವರಣದಲ್ಲಿ ನಡೆಯಲಿದೆ.

*ಛಾಯಾಚಿತ್ರಗಳನ್ನು ಸಾಧಾರಣ ಅಂಚೆ ಅಥವಾ ತ್ವರಿತ ಅಂಚೆ ಇಲ್ಲವೇ ನೋಂದಾಯಿತ ಅಂಚೆ ಮೂಲಕವೇ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕೊಡವೂರು ಪ್ರಕಾಶ್ ಜಿ. 98800 58665, ಜನಾರ್ದನ್ ಕೊಡವೂರು 94482 52363, ಪ್ರಕಾಶ್ ಕೊಡಂಕೂರು 98809 53649, ಸುಕೇಶ್ ಅಮೀನ್ 72041 46368 ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.