ಪರ್ಪಲೆಗಿರಿ: ಫೆ. 14ಕ್ಕೆ ಕಲ್ಕುಡ-ಕಲ್ಲುರ್ಟಿ- ತೂಕತ್ತರಿ ನೇಮೋತ್ಸವ

udupixpress

ಅತ್ತೂರು: ಇಲ್ಲಿನ ಪರ್ಪಲೆಗಿರಿಯಲ್ಲಿ ಆರಾಧಿಸಿಕೊಂಡು ಬಂದಿರುವ ಶ್ರೀ ಕಲ್ಕುಡ-ಕಲ್ಲುರ್ಟಿ- ತೂಕತ್ತರಿ ಸಪರಿವಾರ ದೈವಗಳ ಸನ್ನಿಧಾನದ ಜೀರ್ಣೋದ್ಧಾರದ ಅಂಗವಾಗಿ ಫೆಬ್ರವರಿ 14ರಂದು ಕಲ್ಕುಡ-ಕಲ್ಲುರ್ಟಿ- ತೂಕತ್ತರಿ ದೈವಗಳ ನೇಮೋತ್ಸವ, ಅಷ್ಟೋತ್ತರ ಶತನಾರಿಕೇಳ ಮಹಾಗಣಪತಿ ಯಾಗ, ಸಂಜೀವಿನಿ ಮಹಾಮೃತ್ಯುಂಜಯ ಯಾಗ ಹಾಗೂ ರುದ್ರ ಹೋಮ ನಡೆಯಲಿದೆ.

ಅಂದು ಬಿಳಿಗ್ಗೆ 8ರಿಂದ ಮಹಾಗಣಪತಿ ಯಾಗ, ಮಹಾಮೃತ್ಯುಂಜಯ ಯಾಗ ಹಾಗೂ ರುದ್ರ ಹೋಮ ನೆರವೇರಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8ಗಂಟೆಗೆ ಕಲ್ಕುಡ-ಕಲ್ಲುರ್ಟಿ-ತೂಕತ್ತರಿ ದೈವಗಳ ನೇಮೋತ್ಸವ ಜರುಗಲಿದೆ ಎಂದು ಹಿಂದು ಜಾಗರಣ ವೇದಿಕೆ ಕಾರ್ಕಳ ತಾಲೂಕು ಹಾಗೂ ಅತ್ತೂರು ಕೃಷ್ಣಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.