ಕಾರ್ಕಳ: ಅತ್ತೂರು ಕಾರ್ಕಳ ಸಂತ ಲಾರೆನ್ಸರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಐದನೇ ದಿನವಾದ ಶುಕ್ರವಾರ ಐದು ಬಲಿಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಸಂತ ಲಾರೆನ್ಸರ ನವೇನಾ ಪ್ರಾರ್ಥನೆ ಹಾಗೂ ರೋಗಿಗಳಿಗಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ಮೂಡುಬೆಳ್ಳೆಯ ಫಾದರ್ ಚಾರ್ಲ್ಸ್ ಪುರ್ಟಾಡೊ, ಗಂಟಾಲ್ಕಟ್ಟೆಯ ಫಾದರ್ ರೊನಾಲ್ಡ್ ಪ್ರಕಾಶ್ ಡಿ’ಸೋಜಾ, ಆಳದಂಗಡಿಯ ಫಾದರ್ ನವೀನ್ ಪಿಂಟೊ, ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾದರ್ ಆಸ್ಸಿಸಿ ಆಲ್ಮೇಡ ಹಾಗೂ ಪಲಿಮಾರಿನ ಫಾದರ್ ರೊಕ್ ಡಿಸೋಜಾ ಅವರು ಬಲಿ ಪೂಜೆ ನೆರವೇರಿಸಿದರು.
ನೂರಾರು ಭಕ್ತರು ಬಲಿಪೂಜೆ ಕಾರ್ಯದಲ್ಲಿ ಪಾಲ್ಗೊಂಡರು.