ಬ್ಯುಸಿ, ಕಾಂಪಿಟೇಟಿವ್ ಲೈಫ್ ಸ್ಟೈಲ್ ನಲ್ಲಿ ನಮ್ಮ ಆಸಕ್ತಿ, ಖುಷಿಗಳಿಗೆ ಸಮಯ ಕೊಡೋದೇ ಕಷ್ಟ ಆಗ್ತಿದೆ. ಇಂತಹ ಸಮಯದಲ್ಲಿ ನಮ್ಮ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯ ಕೂಡಾ ತುಂಬಾ ಮುಖ್ಯ ಅಲ್ವಾ. ಮನಸ್ಸು ಫ್ರೆಶ್ ಆಗಿದ್ದರೆ ಎಲ್ಲವೂ ಸುಂದರವಾಗಿ ಕಾಣುತ್ತೆ. ಲೈಫ್ ಖುಷಿಯ ಮೋಡ್ ನಲ್ಲಿರುತ್ತೆ.
ನಾವು ಹೇಳೋ ಕೆಲವು ಸಿಂಪಲ್ ಸೂತ್ರಗಳನ್ನು ಪಾಲಿಸಿ, ಖಂಡಿತ ನೀವು ಮೆಂಟಲಿ ಹೆಲ್ದಿ ಆಗಿರ್ತೀರಾ.
* ನಿಮ್ಮ ಪ್ರೀತಿಪಾತ್ರರಿಗೆ ದಿನದ ಒಂದು ಗಂಟೆಯನ್ನಾದರೂ ಮೀಸಲಿಡಿ.
* ಮಾಡಬೇಕಾಗಿರುವ ಎಲ್ಲಾ ಕೆಲಸಗಳನ್ನು ಪಟ್ಟಿಮಾಡಿ ಕೆಲಸ ಮುಗಿಯುತ್ತಿದ್ದಂತೆ ಅದರ ಮುಂದೊಂದು ಟಿಕ್ ಮಾರ್ಕ್ ಮಾಡಿಬಿಡಿ.
* ಖುಷಿ ಹಾಗೂ ದುಃಖದ ವಿಚಾರಗಳನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಂಡು ಹಗುರಾಗಿ.
* ಹೇಳಿಕೊಳ್ಳಲು ಕಷ್ಟವಾಗುವ ವಿಷಯಗಳನ್ನು ಪುಸ್ತಕದಲ್ಲಿ ಬರೆದು ನಿರಾಳರಾಗಿ.
* ಪ್ರತಿರಾತ್ರಿ ಮಲಗುವ ಮೊದಲು ನಿಮಗೋಸ್ಕರ 5 ರಿಂದ 10 ನಿಮಿಷ ಸಮಯ ಕೊಡಿ.
* ವಾರಕ್ಕೊಮ್ಮೆಯಾದರೂ ವಾಯುವಿಹಾರಕ್ಕೆ ಅಥವಾ ಮನಸ್ಸಿಗೆ ಮುದನೀಡುವ ತಾಣಗಳಿಗೆ ಹೋಗಿ ಅನುಭವಿಸಿ. ಆದರೆ ನಿಮಗಿಷ್ಟರುವ ವ್ಯಕ್ತಿಗಳ ಜೊತೆಗಷ್ಟೇ ಹೋಗಿ.
* ನಿಮ್ಮಿಷ್ಟದ ಕೆಲಸಗಳಿಗೆ ವಾರದಲ್ಲಿ 2 ಗಂಟೆಯಾದರೂ ಸಮಯ ಕೊಡಿ.
* ನಿಮ್ಮ ಪ್ರೀತಿಯ ವ್ಯಕ್ತಿಗಳ ಜೊತೆ ಅಪರೂಪಕ್ಕೊಮ್ಮೆ ತಿರುಗಾಡಿ ಬನ್ನಿ, ಅವರಿಗಾಗಿ ಸಮಯ ಕೊಡಿ.
* ನೀವು ಕಳೆದ ಬಾಲ್ಯದ ದಿನಗಳನ್ನು ಮೆಲುಕು ಹಾಕಿ, ಬಾಲ್ಯದಲ್ಲಿ ಖುಷಿ ಕೊಟ್ಟ ಘಟನೆಯನ್ನೋ, ವ್ಯಕ್ತಿಗಳನ್ನೋ ನೆನಪು ಮಾಡಿಕೊಳ್ಳಿ.
* ಅನಾಥಾಶ್ರಮಗಳು, ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಅವರೊಂದಿಗೆ ಸ್ವಲ್ಪ ಸಮಯ ಕಳೆದು, ಅವರ ಖುಷಿಗೆ ನೀವು ಕಾರಣರಾಗಿ.
-ಬಿ.ಸಂ.ಸುವರ್ಚಲಾ












