ಡ್ರಗ್ಸ್ ದಂಧೆ: ಕನ್ನಡದ ಖ್ಯಾತ ನಟಿಯ ಬಂಧನ

ಮುಂಬಯಿ: ಡ್ರಗ್ಸ್ ದಂಧೆಯೊಂದಿಗೆ ಸಂಪರ್ಕ ಹೊಂದಿದ ಆರೋಪದಡಿ ಕನ್ನಡದ ನಟಿ ಶ್ವೇತಾ ಕುಮಾರಿಯನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ರಿಂಗ್ ಮಾಸ್ಟರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಶ್ವೇತಾ ಕುಮಾರಿ ಮುಂಬಯಿನ ಹೋಟೆಲ್ ನಲ್ಲಿ ತಂಗಿದ್ದರು. ಡ್ರಗ್ ಪೆಡ್ಲರ್ ಜತೆ ತಂಗಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿ 400 ಗ್ರಾಂ ಡ್ರಗ್ ಸಮೇತ ಡ್ರಗ್ ಪೆಡ್ಲರ್ ಚಾಂದ್ ಶೇಖ್ ಮತ್ತು ಶ್ವೇತಾ ಅವರನ್ನು ವಶಕ್ಕೆ ಪಡೆದಿದ್ದರು.

ವಿಚಾರಣೆ ವೇಳೆ ಆರೋಪಿ ನೀಡಿದ ಮಾಹಿತಿ ಆಧರಿಸಿ ಮಾದಕ ಜಾಲದೊಂದಿಗೆ ನೇರ ನಂಟು ಹೊಂದಿದ ವಿಚಾರವಾಗಿ ಶ್ವೇತಾ ಕುಮಾರಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ಮತ್ತು ವೈದ್ಯಕೀಯ ಪರೀಕ್ಷೆಗೂ ಹಾಜರು ಪಡಿಸಲಿದ್ದಾರೆ.