ಜ.9ಕ್ಕೆ ‘ಹಲ್ಲಾಬೋಲ್- ಸಪ್ದರ್ ಹಾಶ್ಮಿ ನೆನಪುಗಳು’ ಸಂವಾದ ಕಾರ್ಯಕ್ರಮ

ಉಡುಪಿ: ಉಡುಪಿ ಸಾಂಸ್ಕೃತಿಕ ವೇದಿಕೆ ರಥಬೀದಿ ಗೆಳೆಯರು ಸಂಸ್ಥೆಯ ಆಶ್ರಯದಲ್ಲಿ ‘ಹಲ್ಲಾಬೋಲ್ – ಸಪ್ದರ್ ಹಾಶ್ಮಿ ನೆನಪುಗಳು’ ಸಂವಾದ ಕಾರ್ಯಕ್ರಮ ಜನವರಿ 9ರಂದು ಮಧ್ಯಾಹ್ನ 2.30ಕ್ಕೆ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆಯಲಿದೆ.

ರಂಗನಟಿ, ಸಾಹಿತಿ ಡಾ. ಮಾಧವಿ ಎಸ್. ಭಂಡಾರಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಬೈಂದೂರಿನ ಶಿಕ್ಷಕ ರಾಘವೇಂದ್ರ ಕೆ. ಸಪ್ದರ್ ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ ಅಧ್ಯಕ್ಷತೆ ವಹಿಸಲಿದ್ದಾರೆ.

ಆ ಬಳಿಕ ‘ಬೀದಿ ನಾಟಕಗಳ ಪರಂಪರೆ, ಪ್ರಯೋಗ ಮತ್ತು ಮೌಲಿಕತೆ’ ಸಂವಾದ ಕಾರ್ಯಕ್ರಮದಲ್ಲಿ ಮೋಹನ್‍ಚಂದ್ರ ಮಂಗಳೂರು, ಪ್ರಸಾದ್ ರಕ್ಷಿದಿ, ಐಕೆ ಬೊಳುವಾರು ವಿಷಯ ಮಂಡನೆ ಮಾಡಲಿದ್ದಾರೆ.
ಸಮುದಾಯ ಕುಂದಾಪುರ ಅಧ್ಯಕ್ಷ ಉದಯ ಗಾಂವ್ಕರ್ ಸಮನ್ವಯಕಾರರಾಗಿ ಭಾಗವಹಿಸಲಿದ್ದಾರೆ.

ಯುವ ರಂಗಕರ್ಮಿಗಳಾದ ಯೋಗೇಶ್ ಬಂಕೇಶ್ವರ, ಕ್ರಿಸ್ಟೋಫರ್ ಡಿ’ಸೋಜಾ, ವಿದ್ದು ಉಚ್ಚಿಲ, ವಿಘ್ನೇಶ್ ಹೊಳ್ಳ ತೆಕ್ಕಾರು, ಭುವನ್ ಮಣಿಪಾಲ, ಶಿಲ್ಪಾ ಶೆಟ್ಟಿ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಸಮುದಾಯ ಕುಂದಾಪುರದ ಸತ್ಯನಾ ಕೊಡೇರಿ, ವಾಸು ಗಂಗೇರ ಮತ್ತು ತಂಡ ಜನಮನದ ಹಾಡುಗಳನ್ನು ಹಾಡಲಿದ್ದಾರೆ.

ಕೋವಿಡ್-19 ಸುರಕ್ಷತಾ ಮಾರ್ಗ ಸೂಚಿಗಳಂತೆ ಜರಗುವ ಈ ಭಿನ್ನ ಕಾರ್ಯಕ್ರಮದಲ್ಲಿ ಉಡುಪಿ ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲ ಭಾಗವಹಿಸಬೇಕೆಂದು ಉಡುಪಿ ರಥಬೀದಿ ಗೆಳೆಯರು ಸಂಸ್ಥೆಯ ಅಧ್ಯಕ್ಷ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ ಮತ್ತು ಕಾರ್ಯದರ್ಶಿಗಳಾದ ಪ್ರೊ. ಸುಬ್ರಹ್ಮಣ್ಯ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.