ಕಾರ್ಕಳ: ತರಕಾರಿ ಸಾಗಿಸುವ ಲಾರಿ ಪಲ್ಟಿ; ಚಾಲಕ ಮೃತ್ಯು

ಕಾರ್ಕಳ: ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಮರಿಗೆ ಬಿದ್ದ ಪರಿಣಾಮ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾಳ ಘಾಟಿಯಲ್ಲಿ ಇಂದು ನಸುಕಿನ ವೇಳೆ ಸಂಭವಿಸಿದೆ.

ಮೃತನನ್ನು ಲಾರಿ ಮಾಲೀಕ -ಚಾಲಕ ಚಿಕ್ಕಮಗಳೂರು ಆಲ್ದೂರಿನ ಅಣ್ಣಪ್ಪ (56) ಎಂದು ಗುರುತಿಸಲಾಗಿದೆ.
ಚಿಕ್ಕಮಗಳೂರಿನಿಂದ ಬಜಗೋಳಿಗೆ ತರಕಾರಿ ಸಾಗಿಸುವ ಲಾರಿ ಇದಾಗಿದ್ದು, ಮಾಳ ಘಾಟಿಯಲ್ಲಿ ಶನಿವಾರ ಎರಡು ನಸುಕಿನ ವೇಳೆ ಈ ದುರ್ಘಟನೆ ನಡೆದಿದೆ.

ಲಾರಿಯಲ್ಲಿದ್ದ ರವಿ ಎಂಬವರು ಗಾಯಗೊಂಡಿದ್ದು, ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.