ಕಾಪು: ದನದ ಕೊಟ್ಟಿಗೆಯಲ್ಲಿ ಭಾರಿ ಗಾತ್ರದ ಮೂರು ಹೆಬ್ಬಾವು ಪತ್ತೆ

ಕಾಪು: ಇಲ್ಲಿನ ಪಾಂಗಾಳದ ನಿವಾಸಿ ಆಲ್ವಿನ್ ಪ್ರಕಾಶ್ ಮನೆಯ ದನದ ಕೊಟ್ಟಿಗೆಯಲ್ಲಿ ನಿನ್ನೆ ಸಂಜೆ ಮೂರು ಹೆಬ್ಬಾವುಗಳು ಪತ್ತೆಯಾಗಿವೆ.

ಮನೆಯವರು ಕೂಡಲೇ ಮುನ್ನ ಕಾಪು ಅವರಿಗೆ ಮಾಹಿತಿ‌ ನೀಡಿದ್ದು, ಕೂಡಲೇ ಸ್ಥಳಕ್ಕೆ ಬಂದ ಮುನ್ನ ನೇತೃತ್ವದ ತಂಡದವರು ಹೆಬ್ಬಾವುಗಳನ್ನು ರಕ್ಷಿಸಿ, ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಮಾಧವ ಪೂಜಾರಿ, ಸತೀಶ್, ಸಂದೀಪ್, ಉಮೇಶ್, ಪ್ರಕಾಶ್ ಅಲ್ವಿನ್, ಜಾರ್ಜ್‌ ಮತ್ತು ರವಿ ಬಿಂದಾಸ್, ಅಲ್ವಿನ್ ಹೆಬ್ಬಾವುಗಳನ್ನು ಹಿಡಿಯಲು ಸಹಕರಿಸಿದರು.