ಉಡುಪಿ: ಕೇಂದ್ರ ಸರ್ಕಾರ ಕೂಡಲೇ ಸ್ಪಂದಿಸಿ ದಾಳಿ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕು. ಯಾವುದೇ ಯುದ್ಧಕ್ಕೆ ಎಡೆಮಾಡಿಕೊಡಬಾರದು. ಸರ್ಜಿಕಲ್ ಸ್ಡ್ರೈಕ್ ಮಾಡಿದರೂ ಉತ್ತಮ. ಯುದ್ಧ ನಡೆದರೆ ಎರಡು ದೇಶಗಳ ಅಮಾಯಕ ಜನರು ಹಾಗೂ ಯೋಧರು ಬಲಿಯಾಗುತ್ತಾರೆ. ಉಗ್ರರಿಗೆ ಶಾಕ್ ಕೊಡಲು ಪ್ರಧಾನಿ ತೀರ್ಮಾನ ಕೈಗೊಳ್ಳಬೇಕು. ರಾಮಮಂದಿರ ನಿರ್ಮಾಣ ವಿಚಾರದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಸಂಘ ಪರಿವಾರದ ಹಿರಿಯ ಮುಖಂಡರು ನಾಲ್ಕು ತಿಂಗಳ ಕಾಲಾವಕಾಶ ಕೇಳಿದ್ದಾರೆ. ಚುನಾವಣಾ ಸಮಯವಾಗಿರುವುದರಿಂದ ರಾಮಮಂದಿರ ವಿಷಯ ಎತ್ತಿದರೆ ತಪ್ಪಾಗಬಹುದು. ಹಾಗಾಗಿ ಈ ತೀರ್ಮಾನಕ್ಕೆ ಬರಲಾಗಿದೆ. ರಾಮಮಂದಿರ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ವಕೀಲರಲ್ಲಿಯೇ ಕೆಲವೊಂದು ಭಿನ್ನಾಭಿಪ್ರಾಯಗಳಿವೆ, ಅದನ್ನು ಸರಿಪಡಿಸಿಕೊಳ್ಳಬೇಕಾಗಿದೆ.
ಸುಗ್ರೀವಾಜ್ಞೆ ಮೂಲಕ ರಾಮಮಂದಿರ ನಿರ್ಮಾಣ ಮಾಡಬೇಕಿದ್ದರೂ ಅದಕ್ಕೆ 6 ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಚುನಾವಣಾ ವರ್ಷ ಆಗಿರುವುದರಿಂದ ಕಾಂಗ್ರೆಸ್ ಕೂಡ ವಿರೋಧ ಮಾಡುವ ಸ್ಥಿತಿಯಲ್ಲಿ ಇಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಹ ಹಿಂದೂ ಪರವಾಗಿದ್ದಾರೆ. ವಿವಾದಾಸ್ಪಾದ 60 ಎಕರೆ ಜಾಗ ಸರಕಾರದ ವಶದಲ್ಲಿದೆ. ಅದನ್ನು ಹಿಂದೂ ಮಹಾಸಭಾಕ್ಕೆ ನೀಡಬಹುದು.
42 ಯೋಧರ ಸಾವು ಬಹಳ ದುಃಖದ ವಿಷಯ ಯಾರೂ ಒಪ್ಪತಕ್ಕದ್ದಲ್ಲ ಯುದ್ಧ ಸ್ವರೂಪದ ಶಾಕ್ ನೀಡಬೇಕು, ಅದನ್ನು ಮೋದಿಯೇ ನಿರ್ಧರಿಸಬೇಕು ಬಾಂಬ್ ಸ್ಫೋಟದಲ್ಲಿ ಹುತಾತ್ಮರಾದ ಸೈನಿಕರಿಗೆ ದೇಶದಲ್ಲಿ ದುಃಖ ವ್ಯಕ್ತವಾಗಿದೆ ಹುತಾತ್ಮರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಸ್ವಾಮೀಜಿ, ದೇಶಕ್ಕಾಗಿ ಸಮಾಜಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರಿಗೆ, ಯೋಗಿಗೆ ಸಿಗುವ ಸದ್ಗತಿ ಪ್ರಾಪ್ತವಾಗುತ್ತದೆ ಎಂದು ಹೇಳಿದರು ಬಳಿಕ ಮಾತನಾಡಿದ ಸ್ವಾಮೀಜಿ ಕೆಂದ್ರದಲ್ಲಿ ಮೋದಿ ರಾಜ್ಯದಲ್ಲಿ ಕುಮಾರಸ್ವಾಮಿ ಒಳ್ಳೆಯ ಬಜೆಟ್ಟನ್ನು ನೀಡಿದ್ದಾರೆ ಅದಕ್ಕಾಗಿ ಅವರಿಬ್ಬರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಯಡಿಯೂರಪ್ಪನ ಆಡಿಯೋ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ಒಳ್ಳೆಯ ವಿಚಾರದಲ್ಲಿ ಮಾತ್ರ ಮಾತನಾಡುತ್ತೇನೆ ಆಡಿಯೋ ವಿಚಾರ ಇನ್ನು ಚರ್ಚೆಯಾಗ ಬೇಕಾಗಿದೆ ಚರ್ಚಾಸ್ಪದ ವಿಷಯ ಗಳಲ್ಲಿ ತೀರ್ಮಾನ ಆಗಬೇಕಾಗಿದೆ ಎಂದರು.
ರಾಮ ಮಂದಿರ ನಿರ್ಮಾಣ ವಿಚಾರವಾಗಿ ಮಾತನಾಡಿದ ಸ್ವಾಮೀಜಿ ಕೇಂದ್ರ ಸರ್ಕಾರ ಸಂವಿಧಾನ ಮತ್ತು ಸುಪ್ರೀಂಕೋರ್ಟ್ ಅನ್ನು ಮೀರಿ ಹೋಗುವುದು ಸರಿಯಲ್ಲ ಎಂಬ ವಿಚಾರ ತಾಳಿದೆ ಸುಗ್ರೀವಾಜ್ಞೆಗೆ ನಮ್ಮ ವಕೀಲರದ್ದು ಸಹಮತವಿಲ್ಲ ಸುಗ್ರೀವಾಜ್ಞೆ ತರುವುದರಿಂದ ಮುಖಭಂಗ ಆಗಬಾರದು ರಾಮ ಮಂದಿರ ಅಂತಿಮ ತೀರ್ಮಾನಕ್ಕೆ ನಾಲ್ಕು ತಿಂಗಳ ಕಾಲಾವಕಾಶ ಬೇಕು ಎಂದು ಪೇಜಾವರ ಶ್ರೀ ಹೇಳಿದರು.