ಪರ್ಲಡ್ಕ ನಿವಾಸಿ ಅವಿವಾಹಿತ ಮಹಿಳೆ ನಾಪತ್ತೆ

ಪುತ್ತೂರು: ನಗರದ ಪರ್ಲಡ್ಕ ನಿವಾಸಿ ಅವಿವಾಹಿತ ಮಹಿಳೆ ಶಾರದಾ (55) ಎಂಬುವವರು ನಾಪತ್ತೆಯಾಗಿದ್ದಾರೆ.

ಶಾರದಾ ಕಳೆದ ಕೆಲ ಸಮಯಗಳಿಂದ ಸಾಲ್ಮರದಲ್ಲಿರುವ ಸಹೋದರಿ ಪುಷ್ಪಲತಾ ಎಂಬವರೊಂದಿಗೆ ವಾಸವಾಗಿದ್ದರು.

ಸೋಮವಾರ ಪೇಟೆಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದ ಅವರು, ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.