ಮಂಗಳೂರು: ಆಟೊ ರಿಕ್ಷಾ ಪಲ್ಟಿಯಾಗಿ ಮೂರು ದಿನಗಳ ಹಸುಗೂಸು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಬಿಸಿ ರೋಡ್ ನ ಬೆಂಜನಪದವು ಸಮೀಪದ ಕಲ್ಪನೆ ತಿರುವು ಬಳಿ ಸಂಭವಿಸಿದೆ.
ಗುರುಪುರ-ಕೈಕಂಬ ನಿವಾಸಿ ಉಮೈರಾ ಎಂಬುವರು ಮೂರು ದಿನಗಳ ಹಿಂದೆಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಿ.ಸಿ.ರೋಡ್ ಕಡೆ ಬರುವ ಖಾಲಿ ಆ್ಯಂಬುಲೆನ್ಸ್ ನಲ್ಲಿ ಬಂದು ಕೈಕಂಬದಲ್ಲಿ ಇಳಿದು, ಬಳಿಕ ಅಲ್ಲಿಂದ ಆಟೊ ರಿಕ್ಷಾದಲ್ಲಿ ಮನೆ ಕಡೆಗೆ ತೆರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ.
ಅಪಘಾತದಿಂದ ತಾಯಿಯ ಮಡಿಲಲ್ಲಿದ್ದ ಹಸುಗೂಸು ಹೊರಗೆಸೆಯಲ್ಪಟ್ಟು ಸಾವನ್ನಪ್ಪಿದೆ. ಚಾಲಕ ಸಹಿತ ಇಬ್ಬರು ಮಹಿಳೆಯರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.