ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಉಡುಪಿXPRESS ಆಯೋಜಿಸಿದ್ದ LOVE ಲಿ ಜೋಡಿ-ಫೋಟೋ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ವಿಭಿನ್ನ, ಆಕರ್ಷಕ ಚಿತ್ರಗಳು ಇಲ್ಲಿವೆ. ಸೈಕಲ್ ನಲ್ಲಿ ಸವಾರಿ ಹೋಗೋದು, ಬೈಕ್ ರೈಡಿಂಗ್ ನಲ್ಲಿ ಲುಕ್ ಕೊಟ್ಟಿದ್ದು, ದೋಣಿಯಲ್ಲಿ ದೂರ ತೀರಕ್ಕೆ ಸಾಗಿದ್ದು, ಮರದ ಮರೆಯಲ್ಲಿ ಕೂತು ಅಟ್ಟಾಮುಟ್ಟಾ ಆಡಿದ್ದು, ತನ್ನ ಹುಡುಗಿಯನ್ನು ಹಿತವಾಗಿ ಎತ್ತಿಕೊಂಡಿದ್ದು, ಅಪ್ಪಿಕೊಂಡಿದ್ದು,ಮೊದಲಾದ ಚೆಂದದ ಚಿತ್ರಗಳು ಜೋಡಿಗಳ ದಾಂಪತ್ಯ ಜೀವನವನ್ನು, ಪ್ರೀತಿಯನ್ನು ಸಾರುತ್ತಿವೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಉಡುಪಿ ಕಡೆಯಿಂದ ರಾಶಿ ರಾಶಿ ಧನ್ಯವಾದಗಳು.ಮತ್ತು ಪ್ರೇಮಿಗಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ನಿಮ್ಮ ಪ್ರೀತಿ ಇನ್ನಷ್ಟು ಜಾಸ್ತಿಯಾಗಲಿ.ಪ್ರೀತಿಯಲ್ಲೇ ಬದುಕು ಧನ್ಯವಾಗಲಿ.
*ಪರಿಕಲ್ಪನೆ:ನಿರ್ವಹಣೆ: ಟೀಮ್ ಉಡುಪಿ ಎಕ್ಸ್ ಪ್ರೆಸ್
ಪುಟ ವಿನ್ಯಾಸ- ಸಂಯೋಜನೆ: ಪವಿತ್ರ ಪೂಜಾರಿ, ಉಡುಪಿ *