ಅಫಘಾತ ಪ್ರಕರಣ: ಆರೋಪಿಗೆ 6 ತಿಂಗಳ ಶಿಕ್ಷೆ

ಉಡುಪಿ: ಕಳೆದ ಎರಡು ವರ್ಷಗಳ ಹಿಂದೆ ಎರ್ಮಾಳು ಗ್ರಾಮದ ಉಚ್ಚಿಲ ಬಡ್ಡಿಂಜೆ ಮಠ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತ ಎಸಗಿ ಪಾದಚಾರಿ ಅಣ್ಣಯ್ಯ ಪೂಜಾರಿ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಾರು ಗ್ರಾಮದ ಮೊಹಮ್ಮದ್‌ ಫಯಾಜ್‌ ಎಂಬಾತನಿಗೆ ಉಡುಪಿ 2ನೇ ಹೆಚ್ಚುವರಿ ಜೆ.ಎಂ.ಎಫ್‌.ಸಿ. ನ್ಯಾಯಾಲಯ 6 ತಿಂಗಳ ಶಿಕ್ಷೆ ಹಾಗೂ ₨ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಆರೋಪಿ ಮೊಹಮ್ಮದ್‌ 2016ರ ಮಾರ್ಚ್‌ 3ರಂದು ರಾತ್ರಿ 7.45 ಸುಮಾರಿಗೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ […]

ಕರ್ನಾಟಕ ರಕ್ಷಣಾ ವೇದಿಕೆಯಿಂದ ವಿಭಿನ್ನವಾಗಿ ಪ್ರೇಮಿಗಳ ದಿನಾಚರಣೆ

ಉಡುಪಿ: ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್‌ ಶೆಟ್ಟಿ ಬಣ) ಉಡುಪಿ ಜಿಲ್ಲಾ ಘಟಕದ ವತಿಯಿಂದ ಬೀಡಿನಗುಡ್ಡೆಯ ನಿರಾಶ್ರಿತರ ಕೇಂದ್ರದಲ್ಲಿ ಗುರುವಾರ ನಿರ್ಗತಿಕರನ್ನು ಕರೆದುಕೊಂಡು ಬಂದು ಅವರನ್ನು ಆರೈಕೆ ಮಾಡಿ ಅವರೊಂದಿಗೆ ಊಟ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಲಾಯಿತು. ಮನೆಯಿಂದ ಹೊರಹಾಕಲ್ಪಟ್ಟ ವೃದ್ಧರು, ಬಸ್‌ ನಿಲ್ದಾಣಗಳಲ್ಲಿ ಅಲೆದಾಡುತ್ತಿದ್ದ ನಿರ್ಗತಿಕರು ಹಾಗೂ ಮಾನಸಿಕ ಅಸ್ವಸ್ಥರು ಸೇರಿದಂತೆ ಒಟ್ಟು ಐದಾರು ಮಂದಿ ನಿರಾಶ್ರಿತರನ್ನು ಕರೆದುಕೊಂಡು ಬಂದು ಅವರಿಗೆ ಸ್ನಾನ ಮಾಡಿ ಅವರನ್ನು ಶುಚಿಗೊಳಿಸಿ ಅವರಿಗೆ ಹೊಸ ಬಟ್ಟೆಗಳನ್ನು […]

ಗಾಂಜಾ ಮಾರಾಟ: ಓರ್ವನ ಬಂಧನ

ಉಡುಪಿ: ಹೆರ್ಗಾ ಗ್ರಾಮದ ಜೋಯಿಸರ ಕಂಪೌಂಡ್ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಾಯಿಕೃಷ್ಣ ಎಂಬಾತನನ್ನು ಸೆನ್ ಅಪರಾಧ ಪೊಲೀಸರು ಬಂಧಿಸಿ, ಆತನಿಂದ 40 ಸಾವಿರ ಮೌಲ್ಯದ 1. 100 ಕಿ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.  

ಕೋಟ ಜೋಡಿ ಕೊಲೆ ಪ್ರಕರಣ: ಮತ್ತೆ ಇಬ್ಬರು ಆರೋಪಿಗಳ ಬಂಧನ. ಬಂಧಿತರ ಸಂಖ್ಯೆ ಹದಿನೈದಕ್ಕೆ

ಕುಂದಾಪುರ: ಕೋಟದ ಮಣೂರು ಗ್ರಾಮದ ಚಿಕ್ಕನಕೆರೆಯಲ್ಲಿ ಇತ್ತೀಚೆಗೆ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ಬಂಧಿತರನ್ನು ಮಣೂರು ಚಿಕ್ಕನಕೆರೆ ನಿವಾಸಿ ಚಂದ್ರಶೇಖರ ರೆಡ್ಡಿ (48) ಮತ್ತು ಬ್ರಹ್ಮಗಿರಿ ನಿವಾಸಿ ರತೀಶ್ ಎಮ್ ಕರ್ಕೇರಾ (34) ಎಂದು ಗುರುತಿಸಲಾಗಿದೆ. ಆರೋಪಿ ಚಂದ್ರಶೇಖರ ರೆಡ್ಡಿ ಪಿಕಪ್ ಹೊಂದಿದ್ದು ಚಾಲಕ ವೃತ್ತಿ ಮಾಡಿಕೊಂಡಿದ್ದು, ಈತನು ಕೊಲೆ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದಾನೆ. ಈತನನ್ನು ಫೆ. 14 ರಂದು […]

ಮಂಗಳೂರು ವಿ.ವಿ. ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟ: ಉಜಿರೆ ಎಸ್‌ಡಿಎಂ ಕಾಲೇಜು ತಂಡ ಚಾಂಪಿಯನ್‌

ಉಡುಪಿ: ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಂಯುಕ್ತ ಆಶ್ರಯದಲ್ಲಿ ತೆಂಕನಿಡಿಯೂರು ಕಾಲೇಜಿನಲ್ಲಿ ಆಯೋಜಿಸಿದ್ದ ಮಂಗಳೂರು ವಿ.ವಿ. ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಮೂಡುಬಿದಿರೆಯ ಆಳ್ವಾಸ್‌ ಕಾಲೇಜು ತಂಡವನ್ನು ಸೋಲಿಸಿದ ಉಜಿರೆ ಎಸ್‌ಡಿಎಂ ಕಾಲೇಜು ತಂಡ ಚಾಂಪಿಯನ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.ಆಳ್ವಾಸ್‌ ಕಾಲೇಜು ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜು ತಂಡ ತೃತೀಯ ಪ್ರಶಸ್ತಿ ಪಡೆದುಕೊಂಡಿತು.ಇದಕ್ಕೂ ಮೊದಲು ನಡೆದ ಉಡುಪಿ ವಲಯ ಮಟ್ಟದ ಪಂದ್ಯಾವಳಿಯ ಫೈನಲ್‌ನಲ್ಲಿ […]