ಸಿಡ್ನಿ: ಸ್ಮಿತ್ ಅವರ ಶತಕದ ನೆರವಿನಿಂದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭಾರತಕ್ಕೆ 390 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 389 ರನ್ ಗಳನ್ನು ಕಲೆ ಹಾಕಿದೆ.
ಸ್ಮಿತ್ ಅವರ ಶತಕ, ಫಿಂಚ್,ವಾರ್ನರ್ ಮಾರ್ನಸ್ ಲಾಬುಶೇನ್ ಮತ್ತು ಮ್ಯಾಕ್ಸ್‌ವೆಲ್ ಅವರ ಅರ್ಧ ಶತಕದ ನೆರವಿನಿಂದ ಆಸ್ಟ್ರೇಲಿಯಾ ಬೃಹತ್ ಮೊತ್ತ ದಾಖಲಿಸಿದೆ.
ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 389
ವಾರ್ನರ್ – 77 ಎಸೆತಗಳಲ್ಲಿ 83 ರನ್
ಪಿಂಚ್- 69 ಎಸೆತಗಳಲ್ಲಿ 60
ಸ್ಮಿತ್ – 64 ಎಸೆತಗಳಲ್ಲಿ 104
ಲಾಬುಶೇನ್ – 61 ಎಸೆತಗಳಲ್ಲಿ 70
ಮ್ಯಾಕ್ಸ್‌ವೆಲ್ – 29 ಎಸೆತಗಳಲ್ಲಿ 63 (ಔಟಾಗದೆ )
ಹೆನ್ರಿಕಸ್- 1 ಎಸೆತದಲ್ಲಿ 2 (ಔಟಾಗದೆ)
ಭಾರತದ ಪರವಾಗಿ ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ ಮತ್ತು ಬೂಮ್ರಾ ತಲಾ ಒಂದು ವಿಕೆಟ್ ಕಬಳಿಸಿದ್ದಾರೆ.