ಮಣಿಪಾಲ: ಎಕೆಎಮ್ಎಸ್ ಬಸ್ ಮಾಲೀಕ ಸೈಫುದ್ದೀನ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಮಂದಿ ಆರೋಪಿಗಳನ್ನು ಮಣಿಪಾಲ ಪೊಲೀಸರು ಇಂದು ಬಂಧಿಸಿದ್ದಾರೆ.
ಕೊಡಗು ವಿರಾಜಪೇಟೆಯ ದರ್ಶನ್ ದೇವಯ್ಯ ಹಾಗೂ ಆತನ ಪತ್ನಿ ಸೌಭಾಗ್ಯ, ಮೂಡುಬಿದಿರೆ ಮಾರ್ನಾಡು ನಿವಾಸಿ ಸಂತೋಷ್ ಪೂಜಾರಿ, ಸೋಮವಾರ ಪೇಟೆ ನಿವಾಸಿ ಅನಿಲ್ ಕುಮಾರ್, ಬೆಳ್ತಂಗಡಿ ಮಾರೋಡಿಯ ಸುಕೇಶ್ ಪೂಜಾರಿ, ಮೂಡುಬಿದಿರೆ ಮಾರ್ನಾಡುವಿನ ಗೋಪಾಲ, ಬೆಳ್ತಂಗಡಿ ಟಿ.ಬಿ. ಕ್ರಾಸ್ ನ ಮೋಹನ, ಕೆ.ಆರ್.ನಗರದ ಶ್ರೀರಾಂಪುರ ನಿವಾಸಿ ಸೋಮು ಹಾಗೂ ಪಿರಿಯಾಪಟ್ಟಣದ ಮಹೇಶ್ ಬಾಬು ಬಂಧಿತ ಆರೋಪಿಗಳು. ಹಾಗೆ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ ಕರ್ಜೆಯ ಹಿಂದೂ ಸಂಘಟನೆಯ ಮುಖಂಡನೊಬ್ಬನನ್ನು ಬಂಧಿಸಲಾಗಿದೆ ಎನ್ನಲಾಗಿದೆ. ಆರೋಪಿಗಳನ್ನು ಕಾರ್ಕಳದ ಲಾಡ್ಜವೊಂದರಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಹತ್ಯೆ ಮುಂಬೈನಿಂದ ಸುಫಾರಿ:
ಸೈಫುದ್ದೀನ್ ಹತ್ಯೆಗೆ ಮುಂಬೈನಿಂದ ಸುಫಾರಿ ಬಂದಿತ್ತು ಹೇಳಲಾಗುತ್ತಿದೆ. ಅದರಂತೆ ಈ ಆರೋಪಿಗಳ ಆತನ ಹತ್ಯೆ ಸಂಚು ರೂಪಿಸಿದ್ದರು. ಅದರಂತೆ ನವೆಂಬರ್ 4 ರಂದು ಸೈಫುದ್ದೀನ್ ಮಣಿಪಾಲ ಲಕ್ಷ್ಮೀಂದ್ರನಗರದ ಎಕೆಎಮ್ಎಸ್ ಬಸ್ ಕಚೇರಿಗೆ ಇರುವುದನ್ನು ಖಚಿತಪಡಿಸಿಕೊಂಡಿದ್ದ ಹಂತಕರು ದಿಢೀರ್ ಆಗಿ ಕಚೇರಿಗೆ ನುಗ್ಗಿ ತಲವಾರಿನಿಂದ ದಾಳಿ ನಡೆಸಿದ್ದರು. ಆದರೆ ಸೈಫುದ್ದೀನ್ ಹಂತಕರ ದಾಳಿಯಿಂದ ಬಚಾವ್ ಆಗಿದ್ದನು.