ಉಡುಪಿ: ಅ. 28ರಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕಾಲೇಜಿಗೆ ತೆರಳಿದ್ದ ಪೆರ್ಡೂರು ಸಮೀಪದ ಅಪ್ರಾಪ್ತ ಬಾಲಕಿ ಬಳಿಕ ಅನ್ಯಕೋಮಿನ ಯುವಕ ಅಪಹರಣ ಮಾಡಿದ್ದ ಎನ್ನಲಾಗಿದ್ದು, ಇದೀಗ ಇಬ್ಬರು ಪತ್ತೆಯಾಗಿದ್ದಾರೆ. ಈ ಇಬ್ಬರನ್ನು ಭಟ್ಕಳದಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ.
ಅನ್ಯಕೋಮಿನ ಯುವಕ ಅಪ್ರಾಪ್ತನಾಗಿರುವುದರಿಂದ ಆತನನ್ನು ಬಾಲಭವನಕ್ಕೆ ಹಸ್ತಾಂತರ ಮಾಡಲಾಗಿದೆ.
ಅಪ್ರಾಪ್ತ ಬಾಲಕಿ ಅ. 28 ರಂದು ಸ್ಕಾಲರ್ ಶಿಪ್ ಗೆ ಅರ್ಜಿ ನೀಡುವುದಕ್ಕಾಗಿ ಕಾಲೇಜಿಗೆ ಹೋಗಿದ್ದಳು. ಬಳಿಕ ಅನ್ಯಕೋಮಿನ ಯುವಕ ಆಕೆಯನ್ನು ತನ್ನ ಬೈಕ್ ನಲ್ಲಿ ಕುರಿಸಿಕೊಂಡು ಭಟ್ಕಳದ ಕಡೆಗೆ ಹೋಗಿದ್ದನು ಎನ್ನಲಾಗಿದೆ.
ಖರ್ಚಿಗೆ ಹಣ ಇರದಿದ್ದಾಗ ಬಾಲಕಿ ತಾಯಿಗೆ ಕರೆ ಮಾಡಿದ್ದಳು. ಮೊಬೈಲ್ ಲೊಕೇಷನ್ ಆಧಾರಿಸಿ ಇಬ್ಬರು ಭಟ್ಕಳದಲ್ಲಿ ಇರುವುದು ದೃಢಪಟ್ಟಿತ್ತು. ಅದರಂತೆ ಹಿರಿಯಡಕ ಪೊಲೀಸರು ಇಬ್ಬರನ್ನು ಭಟ್ಕಳದಲ್ಲಿ ವಶಕ್ಕೆ ಪಡೆದು, ಇಬ್ಬರು ಅಪ್ರಾಪ್ತರಾಗಿರುವ ಕಾರಣ ಬಾಲಕಿಯನ್ನು ಮನೆಯವರ ಸುರ್ಪದಿಗೆ ನೀಡಲಾಗಿದೆ. ಯುವಕನನ್ನು ನ. 14 ರಂದು 18 ವರ್ಷ ಪೂರ್ತಿಗೊಳ್ಳುವ ಕಾರಣ ಆತನನ್ನು ಬಾಲಪರಾಧಿ ಎಂದು ಪರಿಗಣಿಸಿ ಬಾಲಭವನಕ್ಕೆ ಹಸ್ತಾಂತರಿಸಲಾಗಿದೆ.