ಉಡುಪಿ: ಭಾರತದಲ್ಲಿ ವಾಟ್ಸ್ಆ್ಯಪ್ ಮೂಲಕ ಹಣ ಪಾವತಿಗೆ ರಾಷ್ಟ್ರೀಯ ಪಾವತಿ ನಿಗಮದಿಂದ (ಎನ್ಸಿಪಿಐ) ಅನುಮತಿ ಸಿಕ್ಕಿದ್ದು, ಇಂದಿನಿಂದ (ನ.6) ಸೌಲಭ್ಯ ಜಾರಿಗೆ ಬಂದಿದೆ. ಆ್ಯಂಡ್ರಾಯ್ಡ್ ಮತ್ತು ಐಒಎಸ್ ವರ್ಷನ್ ಸ್ಮಾರ್ಟ್ಫೋನ್ಗಳಲ್ಲಿ ಈ ಸೌಲಭ್ಯ ಲಭ್ಯವಿದೆ’ ಎಂದು ಫೇಸ್ಬುಕ್ ತಿಳಿಸಿದೆ.
ಕಾರ್ಯನಿರ್ವಹಣೆ ಹೇಗೆ.?:
ಗೂಗಲ್ ಪೇ, ಪೇಟಿಎಂ ಹಾಗೂ ಫೋನ್ಪೇ ರೀತಿಯಲ್ಲೇ ವಾಟ್ಸ್ಆ್ಯಪ್ ಪೇ ಸಹ ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಮೂಲಕ ಕಾರ್ಯನಿರ್ವಹಿಸುತ್ತದೆ. ಬಳಕೆದಾರರು ಬ್ಯಾಂಕ್ ಖಾತೆ ಜತೆ ಲಿಂಕ್ ಮಾಡುವ ಮೂಲಕ ಹಣ ವರ್ಗಾವಣೆ ಅಥವಾ ಪಾವತಿ ಮಾಡಬಹುದಾಗಿದೆ.
ಹಣ ಪಾವತಿಯ ವಿಧಾನ:
* ಮೊದಲು ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬೇಕು
* ಯಾವ ವ್ಯಕ್ತಿಯ ಖಾತೆಗೆ ಹಣ ವರ್ಗಾಯಿಸಬೇಕೋ ವಾಟ್ಸ್ಆ್ಯಪ್ನಲ್ಲಿ ಆ ವ್ಯಕ್ತಿಯ ಚಾಟ್ ಲಿಸ್ಟ್ಗೆ ತೆರಳಬೇಕು.
* ಸೆಂಡಿಂಗ್ ಆಪ್ಷನಲ್ಲಿರುವ ಅಟ್ಯಾಚ್ಮೆಂಟ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
* ಅಲ್ಲಿ ‘ಪೇಮೆಂಟ್’ ಆಯ್ಕೆ ಮಾಡಿಕೊಂಡರೆ ನಂತರ ಯುಪಿಐ ಪಿನ್ ಮೂಲಕ ಹಣ ವರ್ಗಾವಣೆ ಮಾಡಬಹುದು.
ಸದ್ಯಕ್ಕೆ ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಏಕ್ಸಿಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಜಿಯೊ ಪೇಮೆಂಟ್ಸ್ ಬ್ಯಾಂಕ್ ಗ್ರಾಹಕರು ವಾಟ್ಸ್ಆ್ಯಪ್ ಪೇ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತಿಳಿಸಿದೆ.