ಕರಾವಳಿಯ ವೇಗದ ಸುದ್ದಿ ಜಾಲತಾಣ ಉಡುಪಿ XPRESS,
ಕಳೆದ ವರ್ಷದಂತೆ ಈ ಸಲವೂ ಮಕ್ಕಳ ದಿನಾಚರಣೆ ಪ್ರಯುಕ್ತ “ಅಮ್ಮ with ಕಂದಮ್ಮ” ಅನ್ನೋ ಚಂದದ ಫೋಟೋ ಸ್ಪರ್ಧೆ ಆಯೋಜಿಸಿದೆ.
ಏನ್ ಸ್ಪರ್ಧೆ?
ಅಮ್ಮಂದಿರು ತಮ್ಮ ಕಂದಮ್ಮ ನ ಜೊತೆ ಮುದ್ದಾದ ಫೋಟೋ ಸೆರೆಹಿಡಿದು ಸ್ಪರ್ಧೆಗೆ ಕಳಿಸಬೇಕು. ಆಯ್ಕೆಯಾದ ಮೋಹಕ ಅಮ್ಮ-ಮಗುವಿಗೆ ಬಹುಮಾನ ನಾವ್ ಕೊಡ್ತೇವೆ.
ನಿಯಮಗಳೇನು?
*ಸ್ಪರ್ಧೆಯಲ್ಲಿ 6 ವರ್ಷದೊಳಗಿನ ಮಕ್ಕಳ ಜೊತೆ ಅಮ್ಮಂದಿರು ಭಾಗವಹಿಸಬಹುದು.
*ಪೋಟೋದಲ್ಲಿ ಅಮ್ಮ-ಮಗು ಮಾತ್ರವಿರಬೇಕು. ಮಗುವಿನ ಸಿಂಗಲ್ ಫೋಟೋ, ಫ್ಯಾಮಿಲಿ ಫೋಟೋ ಸ್ಪರ್ಧೆಗೆ ಪರಿಗಣಿಸುವುದಿಲ್ಲ.
*ಸೆಲ್ಫಿ ಫೋಟೋಗಳು ಬೇಡವೇ ಬೇಡ
ನೀವೇನ್ ಮಾಡ್ಬೇಕು?
ನಮ್ಮ ಫೇಸ್ ಬುಕ್ ಪೇಜ್ Udupixpress.com ಗೆ ಮೊದಲು ಲೈಕ್ ಮಾಡಿ, ಬಳಿಕ ನಿಮ್ಮ ಫೋಟೋಗಳನ್ನು Udupixpress.com ಫೇಸ್ಬುಕ್ ಪೇಜ್ ನ ವಾಲ್ ನಲ್ಲಿ ಅಮ್ಮ ಮತ್ತು ಮಗುವಿನ ಹೆಸರು ಮತ್ತು ಊರು ಬರೆದು ಫೋಸ್ಟ್ ಮಾಡಬೇಕು. ನಾವು ಆ ಫೋಟೋ ಅನ್ನು ಶೇರ್ ಮಾಡಿದ ಬಳಿಕವೇ ನೀವು ಆ ಫೋಸ್ಟ್ ಅನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ .ಹೀಗೆ ಶೇರ್ ಮಾಡಿದ ಫೋಟೋಗೆ ಸಿಗುವ ಲೈಕ್ ಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುವುದು.
ಅತೀ ಹೆಚ್ಚು ಲೈಕ್ ಪಡೆದ ಫೋಟೋಗಳಿಗೆ ಮತ್ತು ಲೈಕ್ ಇಲ್ಲದೆಯೂ ತೀರ್ಪುಗಾರರು ಆಯ್ದ ಬೆಸ್ಟ್ ಫೋಟೋಗಳಿಗೆ ಬಹುಮಾನವಿದೆ.
ಈ ವಿಷಯದಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮ ದಿನಾಂಕ 4.11.2020- 10.11.2020 ರ ವರೆಗೆ ಫೋಟೋಗಳ ಲೈಕ್ ನ್ನು ಗಣನೆಗೆ ತೆಗೆದುಕೊಳ್ಳಲಾಗುವುದು.