ಶ್ರೀ ಕಾಂತಾಬಾರೆ ಬೂದಬಾರೆ ಜನ್ಮ ಕ್ಷೇತ್ರ ಕೊಲ್ಲೂರು, ಮಂಗಳೂರು ತಾಲೂಕು ಇದರ ವರ್ಷಾವಧಿ ಜಾತ್ರಾ ಮಹೋತ್ಸವವು ಫೆ.9 ರಿಂದ ಫೆ.11 ವರೆಗೆ ನಡೆಯಲಿದೆ.
ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಆಶ್ಲೇಷ ಬಲಿ ಸೇವೆ ಹಾಗೂ ಕಾಲಾವಧಿ ಜಾತ್ರೆಯು ಶನಿವಾರ ಏಳಂಜೆ ವೇದ ಮೂರ್ತಿ ಶ್ರೀ ಶ್ರೀಧರ ಭಟ್ ರವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗಲಿದೆ.
ಫೆ.9ರಂದು ಗಣ ಹೋಮ, ನವಕ ಶುದ್ಧ, ಪ್ರತಾ: ಶುದ್ಧ, ಚಪ್ಪರ ಮುಹೂರ್ತ ನಡೆಯಲಿದೆ.
ಫೆ.10 ರಂದು ಶ್ರೀ ನಾಗದೇವರ ಸನ್ನಿದಿಯಲ್ಲಿ ನಾಗತಂಬಿಲ, ಪೂರ್ವ ಪ್ರಸನ್ನ ಪೂಜೆ, ದೈವಗಳ ಭಂಡಾರ ಆಗಮನ, ಸಾಮೂಹಿಕ ಆಶ್ಲೇಷ ಬಲಿ ಸೇವೆ, ತಿರುಪತಿ ದೇವರಿಗೆ ಕಾಣಿಕೆ ಅರ್ಪಣೆ, ಮಹಾಮಂಗಳಾರತಿ, ಅನ್ನಸಂತರ್ಪಣೆ, ಜಾರಂದಾಯ ಗುಡ್ಡೆ ಧೂಮಾವತಿ, ಸರಳ ಧೂಮಾವತಿ ಮತ್ತು ಬಂಟ ದೈವಗಳ ನೇಮೋತ್ಸವ ನಡೆಯಲಿದೆ
ಫೆ. 11ರಂದು ಕಾಂತಾಬಾರೆ ಬೂದಬಾರೆ ಯವರ ವೀರ ಚರಿತ್ರೆಯ ಪಠಣ, ಭಂಡಾರ ನಿರ್ಗಮನ ಹಾಗೂ ಕುಟುಂಬದ ವರ್ತೆ ಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ.