ಮುಂಬೈ: ಹಿರಿಯ ಪತ್ರಕರ್ತ, ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಯವರನ್ನು ಮುಂಬೈ ಪೊಲೀಸರು ಇಂದು ಬೆಳಿಗ್ಗೆ ಬಂಧಿಸಿದ್ದಾರೆ.
53 ವರ್ಷದ ಇಂಟೀರಿಯರ್ ಡಿಸೈನರ್ ಅವರ ಆತ್ಮಹತ್ಯೆಗೆ ಅರ್ನಬ್ ಗೋಸ್ವಾಮಿಯವರು ಪ್ರಚೋದನೆ ನೀಡಿರುವ ಆರೋಪದ ಮೇಲೆ ಮುಂಬೈ ಪೊಲೀಸರು ಅವರನ್ನು ಇಂದು ಬೆಳಗ್ಗೆ ಅವರ ಮುಂಬೈ ನಿವಾಸದಲ್ಲಿ ಬಂಧಿಸಿದ್ದಾರೆ.
ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲು ಪೊಲೀಸರು ಯತ್ನಿಸಿದರು. ಅಲ್ಲದೆ ತಮ್ಮ ಪತ್ನಿ, ಪುತ್ರ, ಅತ್ತೆ-ಮಾವಂದಿರ ಮೇಲೆ ಕೂಡ ಹಲ್ಲೆ ನಡೆಸಲು ಯತ್ನಿಸಿದರು ಎಂದು ಅರ್ನಬ್ ಆರೋಪಿದ್ದಾರೆ.
ಪೊಲೀಸರು ಅರ್ನಬ್ ಗೋಸ್ವಾಮಿಯವರನ್ನು ಬಂಧಿಸಿ ಪೊಲೀಸ್ ವ್ಯಾನಿನಲ್ಲಿ ಮುಂಬೈನ ರಾಯಗಡ ಪೊಲೀಸ್ ಠಾಣೆಯ ಕಡೆಗೆ ಕರೆದುಕೊಂಡು ಹೋಗಿದ್ದಾರೆ.
ಎನ್ ಕೌಂಟರ್ ಸ್ಪೆಷೆಲಿಸ್ಟ್ ಸಚಿನ್ ವಾಜೆ ಹಾಗೂ ಸಿಬ್ಬಂದಿ ಅರ್ನಬ್ ಅವರನ್ನು ಬಂಧಿಸಿದ್ದಾರೆ. ಅರ್ನಬ್ ಅವರ ಕೇಸ್ ಗಳನ್ನು ವಾಜೆ ತನಿಖೆ ನಡೆಸುತ್ತಿದ್ದಾರೆ.
ಅರ್ನಬ್ ಗೋಸ್ವಾಮಿ ಮೇಲೆ ಟಿಆರ್ ಪಿ ತಿರುಚಿರುವ ಹಗರಣ ಸಹಿತ ಕೆಲವು ಪ್ರಕರಣಗಳು ದಾಖಲಾಗಿವೆ.