ಉಡುಪಿ: ಯುವಕರಿಬ್ಬರಿಗೆ ದುಷ್ಕರ್ಮಿಗಳ ತಂಡ ಹಲ್ಲೆ ನಡೆಸಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಹೋದ ಘಟನೆ ದೊಡ್ಡಣಗುಡ್ಡೆಯ ಆಟೋ ನಿಲ್ದಾಣದ ಬಳಿ ಸೋಮವಾರ ರಾತ್ರಿ ನಡೆದಿದೆ.
ಲಭೀಶ್ ಎಂಬುವವರು ತನ್ನ ಗೆಳೆಯ ಕಿಶನ್ ಜೊತೆ ಕಾರಿನಲ್ಲಿ ತೆರಳುತ್ತಿದ್ದರು. ಇವರು ದೊಡ್ಡಣಗುಡ್ಡೆಯ ಆಟೋ ನಿಲ್ದಾಣದ ಬಳಿ ತೆರಳುತ್ತಿರುವಾಗ ಸ್ಕಾರ್ಪಿಯೋ ಕಾರೊಂದು ಅತೀ ವೇಗವಾಗಿ ಬಂದು ಕಾರಿನ ಎಡಕ್ಕೆ ತಿರುಗಿಸಿದ್ದಾರೆ. ಇದೇ ಸಂದರ್ಭದಲ್ಲಿ ಬುಲೆಟ್ ನಲ್ಲಿ ಬಂದ ನಿಶಾಂತ ಹಾಗೂ ಸುಮನ್ ಎಂಬುವವರು ಬುಲೆಟ್ ನ್ನು ಲಭೀಶ್ ಪ್ರಯಾಣಿಸುತ್ತಿದ್ದ ಕಾರಿಗೆ ಅಡ್ಡಲಾಗಿ ನಿಲ್ಲಿಸಿದ್ದು.
ಬುಲೆಟ್ ನಿಂದ ಇಳಿದುಬಂದು ಅವರು ಶರತ್ ಭಂಡಾರಿಯ ಜತೆಗೂಡಿ ಕಾರಿನಲ್ಲಿದ್ದ ಲಭೀಶ್ ಹಾಗೂ ಆತನ ಗೆಳೆಯ ಕಿಶನ್ ನನ್ನು ಹೊರಗೆಳೆದು ಹಲ್ಲೆ ನಡೆಸಿದ್ದಾರೆ. ಬಳಿಕ ಲಭೀಶ್ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.