ನವದೆಹಲಿ: ಪತಂಜಲಿ ಸಂಸ್ಥೆ ಸಂಸ್ಥಾಪಕ ಯೋಗಗುರು ಬಾಬಾ ರಾಮ್‌ದೇವ್ ಅವರು ಆನೆಯ ಮೇಲೆ ಕುಳಿತು ಯೋಗಾಸನ ಮಾಡಲು ಹೋಗಿ ಉರುಳಿಬಿದ್ದ ಘಟನೆ ಮಥುರಾದಲ್ಲಿ ನಡೆದಿದೆ.
ಆನೆಯ ಮೇಲೆ ಏರಿ ಕುಳಿತುಕೊಂಡಿದ್ದ ಬಾಬಾ ರಾಮ್‌ದೇವ್ ಅವರು ಯೋಗಾಸನ ಮಾಡುತ್ತಿದ್ದರು. ಈ ವೇಳೆ ಆನೆ ತನ್ನ ದೇಹವನ್ನು ಅಲುಗಾಡಿಸಿದ್ದರಿಂದ ಆಯ ತಪ್ಪಿದ ರಾಮ್‌ದೇವ್ ಅವರು ಆನೆಯ ಮೇಲಿನಿಂದ ಕೆಳಕ್ಕೆ ಬಿದ್ದಿದ್ದಾರೆ.
ಅವರು ಕೆಳಗೆ ಬೀಳುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದ್ದು, ಬಾಬಾ ರಾಮ್‌ದೇವ್ ಶೀಘ್ರ ಗುಣಮುಖರಾಗಲಿ ಎಂದು ಹಲವು ಹಾರೈಸಿದ್ದಾರೆ.