ಜೂನಿಯರ್ ಇಂಜಿನಿಯರ್ ಹುದ್ದೆ: ಅರ್ಜಿ ಆಹ್ವಾನ

ಉಡುಪಿ: ಬೆಂಗಳೂರು ಸ್ಟಾಫ್ ಸೆಲೆಕ್ಷನ್ ಕಮೀಷನ್ ನೇಮಕಾತಿ ಪ್ರಾಧಿಕಾರವು ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಆನ್‍ಲೈನ್ ಸ್ಫರ್ಧಾತ್ಮಕ ಪರೀಕ್ಷಾ ನೇಮಕಾತಿಗೆ ಡಿಪ್ಲೋಮಾ ಇಂಜಿನಿಯರ್/ ಇಂಜಿನಿಯರ್ ಪದವಿ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್ 30 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ (www.ssckkr.kar.nic.in, http://ssc.nic.in) ಅಥವಾ ದೂರವಾಣಿ ಸಂಖ್ಯೆ 080 2550 2520, 0820 257 4869 ಅಥವಾ ಮೊಬೈಲ್ ಸಂಖ್ಯೆ 94838 62020 94802 59790 ಸಂಪರ್ಕಿಸುವಂತೆ […]

ಮಾನಸಿಕ ಆರೋಗ್ಯವನ್ನು ಉತ್ತೇಜಿಸುವ ಡಿಜಿಟೆಲ್ ವೇದಿಕೆ‌ ಉದ್ಘಾಟನೆ

ಮಣಿಪಾಲ: ಟೀಮ್ ಸಮ್ಯಕ್ ದಿಶಾ ವತಿಯಿಂದ ಡಿಜಿಟೆಲ್ ಮಾನಸಿಕ ಆರೋಗ್ಯ ಅನ್ನುವ ಪರಿಕಲ್ಪನೆಯಡಿಯಲ್ಲಿ its okay -ಮಾನಸಿಕ ಆರೋಗ್ಯವನ್ನು ಉತ್ತೇಜಿಸಿವ ನಿಟ್ಟಿನಲ್ಲಿ www.itsokay.support ವೇದಿಕೆಯ ಉದ್ಘಾಟನೆ ಅ.10 ರಂದು ನಡೆಯಿತು. ತರಂಗ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಪೈ, ಮಣಿಪಾಲದ ಪ್ರಾಧ್ಯಾಪಕ, ಮಾನೋ ತಜ್ಞರಾದ ಶ್ರೀಪತಿ ಎಂ ಭಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಮಾಹಿತಿ ನೀಡಿದರು.

ಸಾಲಗಾರರಿಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್: ನ.15ರ ವರೆಗೆ ಕಟ್ಟಬೇಕಿಲ್ಲ ಚಕ್ರಬಡ್ಡಿ

ನವದೆಹಲಿ: ವಿವಿಧ ಬ್ಯಾಂಕ್ ಗಳಿಂದ ಸಾಲ ಪಡೆದುಕೊಂಡವರಿಗೆ ಸುಪ್ರೀಂಕೋರ್ಟ್‌ ಬಿಗ್‌ ರಿಲೀಫ್‌ ನೀಡಿದೆ. ನವೆಂಬರ್ 15ರ ವರೆಗೆ ಬಡ್ಡಿ ಮೇಲೆ ಬಡ್ಡಿಯನ್ನು ಗ್ರಾಹಕರು ಪಾವತಿಸಬೇಕಾಗಿಲ್ಲ ಎಂದು ಕೋರ್ಟ್ ಆದೇಶಿಸಿದೆ. ನ. 15ರ ವರೆಗೆ ಯಾವುದೇ ಸಾಲ ಖಾತೆಯನ್ನು ನಿಷ್ಕ್ರಿಯ ಆಸ್ತಿ ಎಂದು ಘೋಷಿಸಲಾಗುವುದಿಲ್ಲ ಎಂದು ಹೇಳಿರುವ ಕೋರ್ಟ್‌, ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಮನವಿಯ ಮೇರೆಗೆ ಪ್ರಕರಣದ ವಿಚಾರಣೆಯನ್ನು ನವೆಂಬರ್ 2 ರವರೆಗೆ ಮುಂದೂಡಿದೆ. ಬಡ್ಡಿ ಮನ್ನಾ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. […]

ಬಾಳೆಪುಣಿ: ಒಂಟಿ ಮಹಿಳೆಯ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿ ಅರೆಸ್ಟ್

ಮುಡಿಪು: ಬಾಳೆಪುಣಿ ಗ್ರಾಮದ ಬೆಳ್ಳೇರಿ ಎಂಬಲ್ಲಿ ನಡೆದ ಅವಿವಾಹಿತ ಮಹಿಳೆಯೊಬ್ಬರ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯೊಬ್ಬನನ್ನು ಕೊಣಾಜೆ ಪೊಲೀಸರು‌ ಬಂಧಿಸಿದ್ದಾರೆ. ಸೆ. 26ರಂದು ಬಾಳೆಪುಣಿ ಗ್ರಾಮದ ಅವಿವಾಹಿತೆ ಮಹಿಳೆ ಕುಸುಮ (53) ಎಂಬುವವರ ಮೇಲೆ ಅತ್ಯಾಚಾರ ಎಸಗಿ, ಬಳಿಕ ಆಕೆಯನ್ನು‌ ಕೊಲೆ ಮಾಡಲಾಗಿತ್ತು. ಕುಸುಮ ಅವರು ಮನೆಯಲ್ಲಿ ಒಂಟಿಯಾಗಿ ವಾಸಿಸುತಿದ್ದರು. ಬಂಧಿತ ಆರೋಪಿ ಸಕಲೇಶಪುರದ 30ರ ಹರೆಯದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕಳ್ಳತನಕ್ಕೆ ಬಂದವ ಕೊಲೆಗೈದ: ಕಳ್ಳತನಕ್ಕೆ ಮನೆಯೊಳಗೆ ನುಗ್ಗಿದ್ದ ಆರೋಪಿ  ಮಹಿಳೆಯ ಮೇಲೆ […]

ಬಿಹಾರದಲ್ಲಿ ಮತ್ತೆ ಜೆಡಿಯು-ಬಿಜೆಪಿ ಮೈತ್ರಿಕೂಟಕ್ಕೆ ಅಧಿಕಾರ: ಸಿ ವೋಟರ್ ಸಮೀಕ್ಷೆ

ಪಟ್ನಾ: ಬಿಹಾರ ವಿಧಾನಸಭೆಗೆ ಇದೇ ಅಕ್ಟೋಬರ್ 28ರಿಂದ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ. ಅದಕ್ಕೂ ಮುನ್ನ ಕೆಲ ಟಿವಿ ಮಾಧ್ಯಮಗಳ ಚುನಾವಣಾಪೂರ್ವ ಸಮೀಕ್ಷೆಗಳು ರಾಜಕೀಯ ಪಕ್ಷಗಳ ಭವಿಷ್ಯವನ್ನು ನಿರ್ಧರಿಸುವ ಪ್ರಯತ್ನ ನಡೆಸುತ್ತಿವೆ. ಆಡಳಿತಾರೂಢ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 160 ಸೀಟುಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಟೈಮ್ಸ್ ನೌ-ಸಿ ವೋಟರ್ ಸಮೀಕ್ಷೆ ಹೇಳಿದೆ. 243 ಸೀಟುಗಳ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು 122 ಮ್ಯಾಜಿಕ್ ಸಂಖ್ಯೆ ತಲುಪಬೇಕಿದೆ. […]