ಉಡುಪಿ: ಕೊರೊನಾ ಹರಡಲು ಕಾರಣವಾಗುತ್ತಿದೆ ಎಂಬ ಕಾರಣಕ್ಕಾಗಿ ವಿದ್ಯಾಗಮ ಯೋಜನೆಯನ್ನು ಸರ್ಕಾರ ಹೇಗೆ ಸ್ಥಗಿತಗೊಳಿಸಿದೆಯೋ, ಅದರಂತೆ ಆನ್ ಲೈನ್ ಶಿಕ್ಷಣದಿಂದ ಮಕ್ಕಳ ಮೇಲಾಗುತ್ತಿರುವ ದುಷ್ಪಾರಿಣಾಮಗಳ ಬಗ್ಗೆ ಕೂಡ ಗಮನಹರಿಸಬೇಕು ಎಂದು ಚಿಂತಕ ವಾಸುದೇವ ಭಟ್ ಪೆರಂಪಳ್ಳಿ ಅಭಿಪ್ರಾಯಪಟ್ಟಿದ್ದಾರೆ.
ಆನ್ ಲೈನ್ ಶಿಕ್ಷಣದಿಂದ ಆಗುತ್ತಿರುವ ಅನರ್ಥಗಳು ಪೋಷಕರಿಂದ ನಿಧನವಾಗಿ ಕೇಳಿಬರುತ್ತಿದೆ. ಮಕ್ಕಳು ಕ್ಲಾಸ್ ನಡೀತಾ ಇದೆ ಅಂತನೋ ಅಥವಾ ಹೋಮ್ ವರ್ಕ್ ಮಾಡ್ತಾ ಇದ್ದೀವಿ ಅಂತನೋ ಹೆತ್ತವರಿಗೆ ಸಬೂಬು ಹೇಳಿ ಮೊಬೈಲ್ ನಲ್ಲಿ ನೋಡಬಾರದನ್ನು ನೋಡುತ್ತಿದ್ದಾರೆ ಎಂಬ ಆತಂಕವನ್ನು ಪೋಷಕರು ಹೊರಹಾಕುತ್ತಿದ್ದಾರೆ. ಅಲ್ಲದೆ, ಈ ರೀತಿಯ ಬೆಳವಣಿಗೆ ಮಕ್ಕಳ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಮಕ್ಕಳ ಕಲಿಕೆ ಹಾಗೂ ಬೆಳವಣಿಗೆಯ ನಿಟ್ಟಿನಿಂದ ಆನ್ ಲೈನ್ ಶಿಕ್ಷಣ ಬಹಳ ಅಪಾಯಕಾರಿ ಆಗುವ ಸಂಭವ ಎದುರಾಗಿದೆ. ಕೆಲ ಮಕ್ಕಳು ಕಣ್ಣಿನ ಸಮಸ್ಯೆಯನ್ನು ಎದುರಿಸುವಂತಾಗಿದೆ ಎಂದಿದ್ದಾರೆ.
ಮಕ್ಕಳನ್ನು ಮೊಬೈಲ್ ಯಿಂದ ದೂರ ಇಡಿ ಅಂಥ ಹೇಳುತ್ತಿದ್ದೆವೋ, ಅದೇ ಈಗ ಮಕ್ಕಳನ್ನು ಪ್ರಪಾತಕ್ಕೆ ತಳ್ಳುವ ಪರಿಸ್ಥಿತಿ ಬಂದಿರೋದು ಮಾತ್ರ ವಿಪರ್ಯಾಸವೇ ಸರಿ ಎಂದು ವಾಸುದೇವ ಭಟ್ ಅಭಿಪ್ರಾಯಪಟ್ಟಿದ್ದಾರೆ.