ನೀಲಾವರ: ತಮ್ಮ 60ನೇ ಹುಟ್ಟಿದ ದಿನವನ್ನು ಸ್ಮರಣೀಯವಾಗಿಸುವ ಮತ್ತು ಸಾರ್ಥಕವಾಗಿ ಆಚರಿಸುವ ಸದುದ್ದೇಶದಿಂದ ಕರ್ಣಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ, ಉಡುಪಿ ಚಿಟ್ಪಾಡಿ ಬ್ರಾಹ್ಮಣ ಸಮಿತಿಯ ಸಕ್ರಿಯ ಸದಸ್ಯ ಮುದ್ರಾಡಿ ರಾಘವೇಂದ್ರ ಕಲ್ಕೂರರು ನೀಲಾವರ ಗೋಶಾಲೆಗೆ 60 ಸಾವಿರ ರೂ. ದೇಣಿಗೆ ನೀಡಿ ಮಾದರಿಯಾಗಿದ್ದಾರೆ.
ಮನೆಯಲ್ಲಿ ಗೋವುಗಳನ್ನು ಸಾಕಿಕೊಂಡು ತಮ್ಮನ್ನು ಅತ್ಯಂತ ಕಷ್ಟದಿಂದ ಸಾಕಿ ಸಲಹಿದ ಮಾತೃಶ್ರೀ ನಾಗವೇಣಿ ಕಲ್ಕೂರರನ್ನು ಸ್ಮರಿಸಿಕೊಂಡು ಈ ಸಣ್ಣ ಸೇವೆಯನ್ನು ಗೋಶಾಲೆಗೆ ನೀಡಿರುವುದಾಗಿ ಕಲ್ಕೂರರು ಸೌಜನ್ಯದಿಂದ ನುಡಿದರು.

















