ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಹಾಗೂ ಶ್ರದ್ಧಾ ಕಪೂರ್ ಅವರಿಗೆ ವಿಚಾರಣೆ ಹಾಜರಾಗುವಂತೆ ಎನ್ಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕರೀಶ್ಮಾ ಜೊತೆ 2017ರ ಅಕ್ಟೋಬರ್ನಲ್ಲಿ ಡ್ರಗ್ಸ್ಗೆ ಸಂಬಂಧಿಸಿ ದೀಪಿಕಾ ಜೊತೆ ವಾಟ್ಸ್ಆ್ಯಪ್ ಸಂವಹನ ನಡೆಸಿದ್ದರು ಎನ್ನಲಾಗಿದೆ. ಇದರ ಆಧಾರದಲ್ಲಿ ಎನ್ ಸಿಬಿ ತಂಡ ನೋಟಿಸ್ ನೋಡಿದೆ ಎಂದು ರಾಷ್ಟ್ರೀಯ ಸುದ್ದಿವಾಹಿನಿಗಳು ವರದಿ ಮಾಡಿವೆ.
ನಟಿ ರಕುಲ್ ಪ್ರೀತ್ ಸಿಂಗ್ ಹಾಗೂ ಫ್ಯಾಷನ್ ಡಿಸೈನರ್ ಸೀಮೊನ್ ಕಾಂಭಟ್ಟ ಅವರಿಗೂ ಎನ್ ಸಿಬಿ ನೋಟಿಸ್ ಜಾರಿ ಮಾಡಿದೆ ಎನ್ನಲಾಗಿದೆ.
ಟೈಮ್ ನೌ ಮಾಧ್ಯಮ ವರದಿಯ ಪ್ರಕಾರ ನಿರ್ಮಾಪಕ ಮಧು ಮಂತೆನಾ ವರ್ಮಾ ಅವರಿಗೂ ಸೆಪ್ಟೆಂಬರ್ 23ರಂದು ವಿಚಾರಣೆಗೆ ಹಾಜರಾಗುವಂತೆ ಎನ್ಸಿಬಿ ಸಮನ್ಸ್ ನೀಡಿದೆಯಂತೆ. ಮಧು ‘ಗಜಿನಿ‘, ‘ಕ್ವೀನ್‘, ‘ಸೂಪರ್ 30’ಯಂತಹ ಸಿನಿಮಾಗಳಿಗೆ ಹಣ ಹೂಡಿಕೆ ಮಾಡಿದ್ದರು. ಅಲ್ಲದೆ ಕರೀಶ್ಮಾ ಕೆಲಸ ಮಾಡುವ ಕಂಪನಿಯಲ್ಲೂ ಪಾಲುದಾರಿಕೆ ಹೊಂದಿದ್ದಾರೆ ಎಂಬ ಅಂಶವೂ ಹೊರಬಿದ್ದಿದೆ.