ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರು ಕುಡಿಯೋದ್ರಿಂದ ಏನೇನೆಲ್ಲಾ ಲಾಭಗಳಿವೆ?

ತಾಮ್ರದ ಪಾತ್ರೆ ಬಳಸುವವರು ಈಗಂತೂ ಭಾರೀ ಕಡಿಮೆ ಮಂದಿ. ಆದರೆ ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರನ್ನು ಕುಡಿಯೋದರಿಂದ ಆಗುವ ಲಾಭಗಳು ನೂರಾರು. ನೋಡೋಣ ಬನ್ನಿ ತಾಮ್ರದ ಪಾತ್ರೆಯ ನೀರು ಕುಡಿಯೋದರಿಂದ ಏನೇನೆಲ್ಲಾ ಲಾಭವಿದೆ ಅಂತ.

ತಾಮದ್ರ ಪಾತ್ರೆಯಲ್ಲಿ ರಾತ್ರಿಯಿಡೀ ಶೇಖರಿಸಿಟ್ಟ ನೀರನ್ನು ಮುಂಜಾನೆ ಕುಡಿಯುವುದರಿಂದ ವಾತಾ, ಪಿತ್ತ ,ಕಫಗಳಲ್ಲಿ ಏರುಪೇರು ಉಂಟಾಗದಂತೆ ನೋಡಿಕೊಳ್ಳಬಹುದು ಎನ್ನುತ್ತದೆ ಆಯುರ್ವೇದ.

ಕನಿಷ್ಠ ಪಕ್ಷ 8 ಗಂಟೆಗಳ ಕಾಲ ನೀರನ್ನು ತಾಮದ್ರ ಪಾತ್ರೆಗಳಲ್ಲಿ ಇಟ್ಟು ಬಳಿಕ ಕುಡಿಯುದರಿಂದಷ್ಟೇ ಲಾಭಗಳನ್ನು ಪಡೆಯಬಹುದು.

 ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರಿನಲ್ಲಿ ತುಳಸಿ ಎಲೆ ಹಾಕಿ, ನಿರಂತರವಾಗಿ ಕುಡಿಯಬೇಕು ಇದರಿಂದ ಕಫ ಕಡಿಮೆಯಾಗುತ್ತದೆ. ದೇಹದ ಅಂಗಗಳು ಕಾರ್ಯನಿರ್ವಹಿಸಲು ತಾಮ್ರವು ಅತ್ಯಗತ್ಯವಾದ ಖನಿಜ. ದೇಹದಲ್ಲಿ ವಿಷಕಾರಿ ಆಮ್ಲ ಹೊರಹೊಮ್ಮದಂತೆಯೂ ತಡೆಯುತ್ತದೆ 

ತೂಕ ಕಡಿಮೆ ಮಾಡಿಕೊಳ್ಳಲು ದಿ ಬೆಸ್ಟ್:ತಾಮ್ರದ ಪಾತ್ರೆಗಳಲ್ಲಿ ಸಂಗ್ರಹಿಸಿಟ್ಟ ನೀರನ್ನು ಪ್ರತಿದಿನ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಜೀರ್ಣಕ್ರಿಯೆಗೆ ಅನುಕೂಲವಾಗುವುದರ ಜೊತೆಗೆ ದೇಹದಲ್ಲಿ ಕೊಬ್ಬು ಹೆಚ್ಚಾಗದಂತೆ ತಡೆಗಟ್ಟುತ್ತದೆ.

ಗಾಯಗಳು ಬೇಗನೇ ಮಾಯ: ತಾಮ್ರ ಬ್ಯಾಕ್ಟಿರಿಯಾ ಹಾಗೂ ವೈರಸ್ ವಿರೋಧಿ ವಸ್ತುವಾಗಿರುವುದರಿಂದ ಗಾಯಗಳು ಬೇಗನೆ ವಾಸಿಯಾಗಲು ನೆರವಾಗುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ತಾಮ್ರ ಸಹಕಾರಿಯಾಗಿರುವುದರಿಂದ ವಿಶೇಷವಾಗಿ  ಹೊಟ್ಟೆ ಗಾಯಗಳು ಬೇಗನೆ ವಾಸಿಯಾಗುತ್ತವೆ.

ಜೀರ್ಣಕ್ರಿಯೆ ಸರಾಗ : ತಾಮ್ರದ ಬಳಕೆಯಿಂದ ಹೊಟ್ಟೆಯಲ್ಲಿನ  ಬ್ಯಾಕ್ಟೀರಿಯಾ ನಾಶವಾಗುತ್ತವೆ. ಉರಿಯೂತಗಳು ಕಡಿಮೆಯಾಗುತ್ತವೆ. ಜೀರ್ಣಕ್ರಿಯೆ ವ್ಯವಸ್ಥೆ ಸುಗಮವಾಗಿ ನಡೆಯುತ್ತದೆ.

ಕ್ಯಾನ್ಸರ್ ತಡೆಗಟ್ಟುತ್ತೆ:  ದೇಹದಲ್ಲಿ ವಿಕಿರಣಗಳು ಪ್ರವೇಶಿಸಿದಂತೆಯೂ ತಾಮ್ರ  ಕಾರ್ಯನಿರ್ವಹಿಸುತ್ತದೆ. ಈ ವಿಕಿರಣಗಳೇ ಕ್ಯಾನ್ಸರ್ ರೋಗಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.  ಚರ್ಮದ ಆರೋಗ್ಯ ರಕ್ಷಣೆಯಲ್ಲಿ ತಾಮ್ರ ಬಹಳ ಸಹಕಾರಿಯಾಗಿದೆ.

ನೋಡಿ ತಾಮ್ರದ ಪಾತ್ರೆಯಿಂದ ಇಷ್ಟೊಂದೆಲ್ಲಾ ಉಪಯೋಗಗಳಿವೆ.ಒಮ್ಮೆ ತಾಮ್ರದ ಪಾತ್ರೆ ಬಳಸಿ ನೋಡಿ.