ಮುಂಬೈ: ನಟ ಸುಶಾಂತ್ ಸಿಂಗ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ನಟನ ಮರಣೋತ್ತರ ಪರೀಕ್ಷೆಯ ಬಗ್ಗೆಯೂ ಸಾಕಷ್ಟು ಅನುಮಾನಗಳು ವ್ಯಕ್ಯವಾಗಿದೆ.
ಸುಶಾಂತ್ ಸಿಂಗ್ ಕುತ್ತಿಗೆಯ ಹಗ್ಗದ ಗುರುತು ಬಗ್ಗೆ ಸಾಕಷ್ಟು ಸಂಶಯ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಯ ಪ್ರಯೋಗಾಲಯದ ವೈದ್ಯ ಸುಧೀರ್ ಗುಪ್ತಾ ನೇತೃತ್ವದ ತಜ್ಞ ವೈದ್ಯರ ತಂಡವು ತನಿಖೆ ನಡೆಸುತ್ತಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಮುಂಬೈನ ಕೂಪರ್ ಆಸ್ಪತ್ರೆಯ ವೈದ್ಯರ ತೀವ್ರ ವಿಚಾರಣೆ ನಡೆಸುತ್ತಿದೆ. ಮರಣೋತ್ತರ ಪರೀಕ್ಷೆಯಲ್ಲಿ ಕೂಪರ್ ಆಸ್ಪತ್ರೆಯ ವೈದ್ಯರು ಏನಾದ್ರೂ ಎಡವಟ್ಟು ಅಥವಾ ಸುಳ್ಳು ವರದಿ ನೀಡಿದ್ರಾ ಎನ್ನುವುದು ತನಿಖೆಯಿಂದ ಹೊರಬರಲಿದೆ.
ಸುಶಾಂತ್ ಗೆ ವಿಷ ಕೊಟ್ಟು ಸಾಯಿಸಿದ್ರಾ.?
ಸುಶಾಂತ್ ಸಿಂಗ್ ಗೆ ವಿಷ ಕೊಟ್ಟು ಕೊಲೆ ಮಾಡಿದ್ದಾರೆಯೇ ಎಂಬ ಬಗ್ಗೆಯೂ ಅನುಮಾನ ವ್ಯಕ್ತವಾಗಿದ್ದು, ಸಿಬಿಐ ಅಧಿಕಾರಿಗಳು ಈ ಆಯಾಮದಲ್ಲಿ ತನಿಖೆ ಇಳಿದಿದ್ದಾರೆ. ವಿಷ ಕೊಟ್ಟು ಬಳಿಕ ಹಗ್ಗದಿಂದ ಕುತ್ತಿಗೆಯನ್ನು ಬೀಗಿದು ಕೊಲೆ ಮಾಡಿದ್ರಾ?. ಡ್ರಗ್ಸ್ ಕೊಟ್ಟು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಬಳಿಕ ಹಗ್ಗದಿಂದ ಕುತ್ತಿಗೆ ಬೀಗಿದು ಸಾಯಿಸಿದ್ದಾರೆಯೇ ಎಂಬ ನಿಟ್ಟಿನಲ್ಲಿಯೂ ಅಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ.
ಆದರೆ ಅಧಿಕಾರಿಗಳಿಗೆ ಈವರೆಗೆ ಕೊಲೆ ಆಗಿದೆ ಎನ್ನುವುದಕ್ಕೆ ಬಲವಾದ ಸಾಕ್ಷ್ಯ ಸಿಕ್ಕಿಲ್ಲ ಎನ್ನಲಾಗುತ್ತಿದೆ.
ಸಿಬಿಐ ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದೆ. ಆದರೆ ಪ್ರಕರಣ ಎಲ್ಲಿಗೆ ಹೋಗಿ ತಲುಪುತ್ತದೆ ಎಂದು ಕಾದುನೋಡಬೇಕಿದೆ.