ಮುಂಬೈ: ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ ನಟಿ ರಿಯಾ ಚಕ್ರವರ್ತಿಗೆ ದಿನದಿಂದ ದಿನಕ್ಕೆ ಬೀಗಿಗೊಳ್ಳುತ್ತಿದ್ದು, ರಿಯಾಳ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಇದೀಗ ಡ್ರಗ್ಸ್ ದಂಧೆಯ ನಂಟಿನ ಆರೋಪದಡಿ ರಿಯಾ ಚಕ್ರವರ್ತಿಗೆ ಮಾದಕವಸ್ತು ನಿಯಂತ್ರಣ ದಳದ (ಎನ್ಸಿಬಿ) ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದು, ಇಂದು ಬೆಳಿಗ್ಗೆ 11 ಗಂಟೆಗೆ ಎನ್ ಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ಎನ್ಸಿಬಿ ಕಸ್ಟಡಿಯಲ್ಲಿ ಇರುವ ರಿಯಾ ಚಕ್ರವರ್ತಿ ಸಹೋದರ ಶೋವಿಕ್, ಸ್ಯಾಮುಯೆಲ್ ಮಿರಾಂಡ ಹಾಗೂ ದೀಪೇಶ್ ಸಾವಂತ್ ವಿಚಾರಣೆ ವೇಳೆ ರಿಯಾ ಚಕ್ರವರ್ತಿ ಡ್ರಗ್ಸ್ ತಯಾರಿಸಿಕೊಂಡಿದ್ದಳು ಎಂದು ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಎನ್ ಸಿಬಿ ನೋಟಿಸ್ ಜಾರಿ ಮಾಡಿದೆ.
ವಿಚಾರಣೆಗೆ ಹಾಜರಾಗದಿದ್ದರೆ ಬಂಧನ?.
ರಿಯಾ ಚಕ್ರವರ್ತಿ ಒಂದು ವೇಳೆ ಸರಿಯಾದ ಸಮಯಕ್ಕೆ ವಿಚಾರಣೆಗೆ ಹಾಜರಾಗದಿದ್ದರೆ ಎನ್ ಸಿಬಿ ಅಧಿಕಾರಿಗಳು ಕೋರ್ಟ್ ನಿಂದ ವಾರೆಂಟ್ ಪಡೆದು ಬಂಧಿಸುವ ಸಾಧ್ಯತೆ ಇದೆ. ರಿಯಾಳ ವಿರುದ್ಧ ಮಾದಕವಸ್ತುಗಳ ಖರೀದಿ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳಿವೆ ಎಂದು ಹೇಳಿದೆ. ಹಾಗಾಗಿ ರಿಯಾ ವಿಚಾರಣೆಗೆ ಹಾಜರಾಗದೆ ರಿಸ್ಕ್ ತೆಗೆದುಕೊಳ್ಳುವ ಸಾಧ್ಯತೆ ಹೇಳಲಾಗುತ್ತಿದೆ.