ಚೆನ್ನೈ: ಇಲ್ಲಿನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಅವರಿಗೆ ಕೊರೊನಾ ನೆಗೆಟಿವ್ ವರದಿ ಬಂದಿದೆ.
ನಮ್ಮ ತಂದೆಯ ಆರೋಗ್ಯ ಸ್ಥಿರವಾಗಿದೆ.
ಅವರ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಈಗ ಅವರು ಆರಾಮದಿಂದ ಇದ್ದಾರೆ ಎಂದು ಎಸ್ಪಿಬಿ ಪುತ್ರ ಚರಣ್ ಹೇಳಿರುವುದಾಗಿ ಪಿಆರ್ಒ ನಿಖಿಲ್ ಮುರುಗನ್ ತಿಳಿಸಿದ್ದಾರೆ.
ಎಸ್ಪಿಬಿ ಅವರು ಈಗಲೂ ಐಸಿಯುನಲ್ಲಿ ವೆಂಟಿಲೇಟರ್ ಮತ್ತು ಇಸಿಎಂಒ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.












