ಕಾರ್ಕಳ: ಜಿಲ್ಲಾ ಮಲೆಕುಡಿಯ ಸಂಘದ ವತಿಯಿಂದ 74 ನೇ ಸ್ವಾತಂತ್ರ್ಯೋತ್ಸವವು ಸಂಘದ ಕೇಂದ್ರ ಕಚೇರಿ ವಠಾರ ಪೇರಡ್ಕಾದಲ್ಲಿ ನಡೆಯಿತು.
ರಾಜ್ಯ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಈದು ಧ್ವಜಾರೋಹಣ ನಡೆಸಿದರು.
ಧ್ವಜವಂದನೆ ಕಾರ್ಯಕ್ರಮವನ್ನು ಪ್ರಶಾಂತ್ ಹೆರ್ಮುಂಡೆ ನೆರವೇರಿಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ಅಧ್ಯಕ್ಷರಾದ ಮಂಜಪ್ಪ ಗೌಡ ನೂರಾಳ್ ಬೆಟ್ಟು, ಕಾರ್ಯದರ್ಶಿ ಸಾಧು ಗೌಡ ನಾರ್ಜೆ, ಜಿಲ್ಲಾ ಉಪಾಧ್ಯಕ್ಷ ರಾದ ಸುಂದರ ಗೌಡ ಮುದ್ರಾಡಿ ಮತ್ತು ಗೋಪಾಲ ಗೌಡ ಎತ್ತಲ್ ಗುಡ್ಡೆ, ಕೋಶಾಧಿಕಾರಿ ವಿಷ್ಣುಮೂರ್ತಿ ಕೆರ್ವಾಶೆ, ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಅಂಡಾರ್, ಕಾರ್ಕಳ ತಾಲೂಕು ಸಮಿತಿ ಅಧ್ಯಕ್ಷ ರಾದ ಶೇಖರ ಬೆಜ್ಜಾಲೆ, ಹೆಬ್ರಿ ತಾಲೂಕು ಸಮಿತಿಯ ಅಧ್ಯಕ್ಷ ರಾದ ಉದಯ ಬಲ್ಲಾಡಿ, ಕಾರ್ಕಳ ಮತ್ತು ಹೆಬ್ರಿ ಸಮಿತಿಯ ಪದಾಧಿಕಾರಿಗಳು ಹಾಗೂ ನಾನಾ ಗ್ರಾಮ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು, ಉಪಸ್ಥಿತರಿದ್ದರು.