ಕಾರ್ಕಳ: ಕಾರ್ಕಳ ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಗೋ ಕಳ್ಳತನ, ಗೋ ಸಾಗಾಟ ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ ಹೂಡುವ ಷಡ್ಯಂತ್ರದ ವಿರುದ್ಧ ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಕಳ ಪ್ರಖಂಡದ ವತಿಯಿಂದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಬಜರಂಗದಳದ ಪ್ರಾಂತ ಸಂಚಾಲಕ ಸುನಿಲ್ ಕೆ.ಅರ್, ವಿಶ್ವಹಿಂದೂ ಪರಿಷದ್ ಕಾರ್ಕಳ ಪ್ರಖಂಡದ ಉಪಾಧ್ಯಕ್ಷ ಅಶೋಕ್ ಪಾಲಡ್ಕ, ಸಹ ಕಾರ್ಯದರ್ಶಿ ಜಗದೀಶ್ ಸಾಣೂರ್, ಜಿಲ್ಲಾ ಗೋ ರಕ್ಷಾ ಪ್ರಮುಖ್ ಸುಧೀರ್ ನಿಟ್ಟೆ, ಶ್ರೀಧರ್ ಕಾಮತ್, ಚೇತನ್ ಪೆರಲ್ಕೆ, ಸುನಿಲ್ ನಿಟ್ಟೆ, ಅವಿನಾಶ್, ಪ್ರಸಾದ್ ನಿಟ್ಟೆ ಹಾಗೂ ಸಂಘಪರಿವಾರದ ಪ್ರಮುಖರು ಉಪಸ್ಥಿತರಿದ್ದರು.












