ಕುವೈಟ್ ನಿಂದ ಯಶಸ್ವಿಯಾಗಿ ತಾಯ್ನಾಡಿಗೆ ತಲುಪಿದ ಖಾಸಗಿ ವಿಮಾನ

ಉಡುಪಿ: ಕುವೈಟ್ ನ ಕರ್ನಾಟಕ ಸಂಘಗಳು ಒಂದುಗೂಡಿ ಅಕ್ಬರ್ ಟ್ರಾವೆಲ್ಸ್ ನ ಸಹಯೋಗದೊಂದಿಗೆ ಕೋವಿಡ್-19 ಮಹಾಮಾರಿಗೆ ಸಿಲುಕಿ ಸಂಕಷ್ಟಕ್ಕೆ ಒಳಗೊಂಡ ಕುವೈಟ್ ಕನ್ನಡಿಗರನ್ನು ತಾಯ್ನಾಡಿಗೆ ತಲುಪಿಸುವ ಸಲುವಾಗಿ ಜಜೀರಾ ಖಾಸಗಿ ವಿಮಾನವು ಯಶಸ್ವಿಯಾಗಿ ಹಾರಾಟ ನಡೆಸಿತು.

ಹಿರಿಯ ನಾಗರಿಕರು, ಗರ್ಭಿಣಿ ಸ್ತ್ರೀಯರು, ಅವಧಿ ಮುಗಿದ ಭೇಟಿ ವೀಸಾ ಹೊಂದಿದವರು, ಕೆಲಸ ಕಳೆದುಕೊಂಡವರು ಹೀಗೆ ತಾಯಿ ನಾಡಿಗೆ ಬರಲಾಗದೆ ಕೋವಿಡ್ 19 ನಿಂದ ಸಮಸ್ಯೆ ಅನುಭವಿಸುತ್ತಿದ್ದ 165 ಪ್ರಯಾಣಿಕರನ್ನು ಒಳಗೊಂಡ ಖಾಸಗಿ ವಿಮಾನವು ಸುರಕ್ಷಿತವಾಗಿ ಮಂಗಳೂರು ವಿಮಾನ ನಿಲ್ದಾಣವನ್ನು ತಲುಪಿತು.

ಭಾರತ ಸರ್ಕಾರವು ವಂದೇ ಭಾರತ್ ಮಿಷನ್ ಘೋಷಿಸಿದ ಸಮಯದಿಂದ ಎಲ್ಲ ಕುವೈಟ್ ಕರ್ನಾಟಕ ಸಂಘಗಳು ‘ಯುನೈಟೆಡ್ ಕರ್ನಾಟಕ ಅಸೋಸಿಯೇಷನ್ಸ್ ಆಫ್ ಕುವೈಟ್ ’ ಬ್ಯಾನರ್ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಸಾಧ್ಯವಿರುವ ಎಲ್ಲ ಸಂಪರ್ಕಗಳನ್ನು ಸಂಪರ್ಕಸಿದ್ದು, ತೊಂದರೆಗೀಡಾದ ಕುವೈಟ್ ಕನ್ನಡಿಗರನ್ನು ಹಿಂತಿರುಗಿಸಲು ವಿನಂತಿಸಿದ್ದರು. ಅವರಲ್ಲಿ ಹಲವರ ವೈದ್ಯಕೀಯ ಸ್ಥಿತಿ ಗಂಭೀರವಾಗಿದ್ದು, ಕೆಲವರು ಉದ್ಯೋಗ ಕಳೆದುಕೊಂಡಿದ್ದರು ಮತ್ತು ಕಳೆದ 3-4 ತಿಂಗಳುಗಳಿಂದ ವೇತನ ಇಲ್ಲದೆ ಸಮಸ್ಯೆಯಲ್ಲಿದ್ದವರು ಮತ್ತು ಕೆಲವು ಗರ್ಭಿಣಿಯರು ಇದ್ದರು.

 

ಪೂರ್ಣ ಪ್ರಮಾಣದ ಸಹಕಾರ ನೀಡಿದ ಅಕ್ಬರ್ ಟ್ರಾವೆಲ್ಸ್ ನ ಪ್ರಾದೇಶಿಕ ವ್ಯವಸ್ಥಾಪಕರಾದ ಶೇಖ್ ಅಬ್ದುಲ್ಲಾ, ತುಳುಕೂಟ ಕುವೈಟ್ ನ ಅಧ್ಯಕ್ಷರಾದ ರಮೇಶ್ ಎಸ್ ಭಂಡಾರಿ ಮುತುವರ್ಜಿ ವಹಿಸಿದ್ದರು. ಸ್ಟೀವನ್ ರೆಗೊ, ಶ್ರಾಜೇಶ್ ವಿಟ್ಟಲ್, ಗುರುಪ್ರಸಾದ್ ಹೆಗ್ಡೆ ಮತ್ತು ಜಜೀರಾ ಏರ್ವೇಸ್ ನ ಮುಖ್ಯಸ್ಥರು ಹಾಗು ಮಂಗಳೂರು ಡಿಸಿ ಸಿಂಧು ರೂಪೇಶ್, ಡಾ.ಯತೀಶ್ ಉಲ್ಲಾಲ್, ಮನೀಶ್, ಎಸ್. ಎಂ. ಅಜರ್, ಕೃಷ್ಣ ಪೂಜಾರಿ, ಅಬ್ದುಲ್ ನಾಸರ್ ಖಾನ್, ಜಾಫರ್ ಸಾದಿಕ್, ರಾಜ್ ಭಂಡರಿ, ರಾಜೇಶ್ ಮೆಂಡನ್, ಡಾ.ಸುರೇಂದ್ರ ನಾಯಕ್ ಮೊದಲಾದವರು ಸಹಕರಿಸಿದ್ದರು.