ಕೊರೊನಾ ವೈರಸ್‌ ಗೆ ಬ್ರೆಜಿಲ್‌ನಲ್ಲಿ ಒಂದೇ ದಿನ 1,005 ಮಂದಿ ಬಲಿ

ಕೊರೊನಾ ಸೋಂಕು ಲ್ಯಾಟಿನ್‌ ಅಮೆರಿಕದ ಬ್ರೆಜಿಲ್‌ ಗೆ ವ್ಯಾಪಿಕವಾಗಿ ಹರಡಿದ್ದು, ಬ್ರೆಜಿಲ್ ನಲ್ಲಿ ಕಳೆದ 24 ಗಂಟೆಯಲ್ಲಿ 1,005 ಮಂದಿ ಮೃತಪಟ್ಟಿದ್ದಾರೆ ಎಂದು ಬ್ರೆಜಿಲ್‌ ಆರೋಗ್ಯ ಸಚಿವಾಲಯ ಹೇಳಿಕೆ ನೀಡಿದೆ.
ಸೋಂಕಿಗೆ ಬ್ರೆಜಿಲ್‌ನಲ್ಲಿ ಒಟ್ಟು 34,000ಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆಯಲ್ಲಿ ಇಟಲಿಯನ್ನು ಹಿಂದೆಹಾಕಿದೆ. ಜಾಗತಿಕವಾಗಿ ಕೊರೊನಾ ಸೋಂಕಿನಿಂದ ಸಾವೀಗಿಡದವರ ಸಂಖ್ಯೆ 4,00,000 ಸಮೀಪಿಸಿದೆ. ಸಾವಿನ ಲೆಕ್ಕಾಚಾರದಲ್ಲಿ ಬ್ರೆಜಿಲ್‌ ಈಗ ಮೂರನೇ ಸ್ಥಾನದಲ್ಲಿದೆ.
ಜಗತ್ತಿನಾದ್ಯಂತ ಒಟ್ಟು 68,44,705 ಕೊರೊನಾ ಸೋಂಕು ಪ್ರಕರಣಗಳು  ದಾಖಲಾಗಿದ್ದು, ಸೋಂಕಿನಿಂದ 3,98,141 ಮಂದಿ ಮೃತಪಟ್ಟಿದ್ದಾರೆ.
33,48,831 ಜನ ಗುಣಮುಖರಾಗಿದ್ದಾರೆ ಎಂದು ವರ್ಡೋಮೀಟರ್‌ ತಿಳಿಸಿದೆ.