ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಪೈಲ್ವಾನ್’ ಚಿತ್ರದ ಟೀಸರ್ ಇದೀಗ ಬಿಡುಗಡೆಯಾಗಿದೆ. ಸಂಕ್ರಾಂತಿ ಹಬ್ಬದ ವಿಶೇಷವಾಗಿ ಚಿತ್ರದ ಎರಡನೇ ಟೀಸರ್ ಹೊರ ಬಂದಿದೆ.
ಚಿತ್ರದ ಟೀಸರ್ ಗಾಗಿ ಕಾಯುತ್ತಿದ್ದ ಅಭಿಮಾನಿಗಳು ಕೊನೆಗೂ ಕಿಚ್ಚನ ದರ್ಶನ ಮಾಡಿದ್ದಾರೆ. ಟೀಸರ್ ನೋಡುತ್ತಿದ್ದರೆ ‘ಪೈಲ್ವಾನ್’ ತಕ್ಕತ್ತು ಎಷ್ಟರ ಮಟ್ಟಗೆ ಇದೆ ಎನ್ನುವುದು ತಿಳಿಯುತ್ತದೆ. 1 ನಿಮಿಷ 3 ಸೆಕೆಂಡ್ ಚಿತ್ರದ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಆಕಾಂಕ್ಷ ಸಿಂಗ್ ಸಿನಿಮಾಗೆ ನಾಯಕಿಯಾಗಿದ್ದಾರೆ. ಇದೆ ಬೇಸಿಗೆ ಕಾಲದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
‘ಪೈಲ್ವಾನ್’ ಸಿನಿಮಾವನ್ನು ಕೃಷ್ಣ ನಿರ್ದೇಶಕ ಮಾಡುತ್ತಿದ್ದು. ‘ಹೆಬ್ಬುಲಿ’ ಬಳಿಕ ಮತ್ತೆ ಕಿಚ್ಚನ ಜೊತೆಗೆ ಕೃಷ್ಣ ಸಿನಿಮಾ ಮಾಡಿದ್ದಾರೆ. ನಿರ್ದೇಶನ ಮಾತ್ರವಲ್ಲದೆ ಈ ಸಿನಿಮಾಗೆ ಅವರೇ ಬಂಡವಾಳ ಹಾಕಿದ್ದಾರೆ.