ಉಡುಪಿ:ಸ್ವದ್ಯೋಗ ಕ್ಷೇತ್ರದಲ್ಲಿ ಆಸಕ್ತಿ ಇರುವ ನಿರುದ್ಯೋಗ ಯುವಜನತೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಭರ್ಜರಿ ತರಬೇತಿ ನೀಡಲಿದೆ.ಇಲ್ಲಿದೆ ನೋಡಿ ಸಂಸ್ಥೆ ಯಾವ ಯಾವ ತರಬೇತಿ ಕೊಡಲಿದೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ
ಏನೇನು ತರಬೇತಿ ಇದೆ?
ಹೌಸ್ ವಯರಿಂಗ್ 30 ದಿನಗಳು, ದ್ವಿ ಚಕ್ರ ವಾಹನ ರಿಪೇರಿ 30 ದಿನಗಳು, ಹಪ್ಪಳ, ಸಂಡಿಗೆ, ವಿವಿಧ ಬಗೆಯ ಮಸಾಲ ಪೌಡರ್ ಗಳ ತಯಾರಿ 10 ದಿನಗಳು, ಪೇಪರ್ ಬ್ಯಾಗ್, ಎನ್ವಲಪ್, ಬಟ್ಟೆ ಬ್ಯಾಗ್ಗಳ ತಯಾರಿ 10 ದಿನಗಳು, ಮಹಿಳೆಯರ ಟೈಲರಿಂಗ್ 30 ದಿನಗಳು, ಬ್ಯೂಟಿ ಪಾರ್ಲರ್ ಮ್ಯಾನೇಜ್ಮೆಂಟ್ 30 ದಿನಗಳು, ಮೊಬೈಲ್ ರಿಪೇರಿ 30 ದಿನಗಳು, ಟಿ.ವಿ ಟೆಕ್ನೀಷಿಯನ್ 30 ದಿನಗಳು, ರೆಫ್ರೀಜರೇಶನ್ ಹಾಗೂ ಏರ್ ಕಂಡೀಶನಿಂಗ್ 30 ದಿನಗಳು, ಫೋಟೋಗ್ರಫಿ ಹಾಗೂ ವೀಡಿಯೋಗ್ರಫಿ 30 ದಿನಗಳು, ಎಲೆಕ್ಟ್ರಿಕ್ ಮೋಟಾರ್ ರೀವೈಂಡಿಂಗ್ 30 ದಿನಗಳು, ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿ 10 ದಿನಗಳು,
ಕಂಪ್ಯೂಟರ್ ಹಾರ್ಡ್ ವೇರ್ ಮತ್ತು ನೆಟ್ ವರ್ಕಿಂಗ್ 45 ದಿನಗಳು, ಗೃಹೋಪಯೋಗಿ ವಿದ್ಯುತ್ ಉಪಕರಣಗಳ ದುರಸ್ತಿ 30 ದಿನಗಳು, ಫಾಸ್ಟ್ ಫುಡ್ ತಯಾರಿ 10 ದಿನಗಳು, ಕೃತಕ ಆಭರಣಗಳ ತಯಾರಿ 13 ದಿನಗಳು ಈ ಎಲ್ಲ ವಿಷಯಗಳ ಕುರಿತು ಉಚಿತ ತರಬೇತಿಯನ್ನು ಮಣಿಪಾಲದಲ್ಲಿ ಹಮ್ಮಿಕೊಳ್ಳಲಾಗುವುದು.
ತರಬೇತಿಯಲ್ಲಿ ಊಟ – ವಸತಿ ಸಂಪೂರ್ಣವಾಗಿ ಉಚಿತವಾಗಿದ್ದು; ಸಂಬಂಧಿಸಿದ ಕ್ಷೇತ್ರದ ಬಗ್ಗೆ ವಿಸ್ತಾರವಾಗಿ ತಿಳಿಸುವುದರ ಜೊತೆಗೆ ಉದ್ಯಮಶೀಲತೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಮಾಹಿತಿ ನೀಡಲಾಗುತ್ತದೆ. ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ನೆಲೆಸಿರುವ 18 ರಿಂದ 45 ರೊಳಗಿನ ವಯೋಮಾನದ ನಿರುದ್ಯೋಗಿ ಯುವಕ/ ಯುವತಿಯರು ಈ ತರಬೇತಿಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಕೂಡಲೇ ತಮ್ಮ ಹೆಸರು, ಪೂರ್ಣವಿಳಾಸ, ಪಿನ್ ಕೋಡ್, ಸಂಪರ್ಕಕ್ಕೆ ಲಭ್ಯವಿರುವ ದೂರವಾಣಿ ಸಂಖ್ಯೆ, ವಯಸ್ಸು, ವಿದ್ಯಾರ್ಹತೆ, ಪಡೆಯಲಿಚ್ಚಿಸಿರುವ ತರಬೇತಿಯ ಹೆಸರು, ಮುಂತಾದ ಮಾಹಿತಿಯೊಂದಿಗೆ ಖಾಲಿ ಹಾಳೆಯಲ್ಲಿ ಅರ್ಜಿಯನ್ನು ಸಲ್ಲಿಸಬಹ್ಮದಾಗಿದೆ. ಈ ಕೆಳಗಿನ ವಿಳಾಸಕ್ಕೆ ತಲುಪುವಂತೆ ಕಳುಹಿಸಿಕೊಡಲು ಕೋರಲಾಗಿದೆ. ಒಬ್ಬ ಅಭ್ಯರ್ಥಿಗೆ ಒಂದು ತರಬೇತಿಯನ್ನು ಪಡೆಯಲು ಅವಕಾಶವಿರುತ್ತದೆ. ಆಸಕ್ತ ಕ್ಷೇತ್ರಕ್ಕೆ ಅರ್ಜಿಯನ್ನು ಕಳುಹಿಸಬೇಕಾಗಿ ವಿನಂತಿ. ಪ್ರಥಮವಾಗಿ ಬಂದ ಅರ್ಜಿಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು. ಪ್ರಸ್ತುತ ಕೊರೋನಾ ವ್ಶೆರಸ್ ಸಮಸ್ಯೆ ಹೆಚ್ಚಾಗಿರುವುದರಿಂದ ಸರಕಾರದ ಆದೇಶದ ನಂತರ ತರಬೇತಿಗಳನ್ನು ಪ್ರಾರಂಬಿಸಲಾಗುವುದು.
ಸಂಸ್ಥೆಯ ದೂರವಾಣಿ ಸಂಖ್ಯೆ: 0820- 2570455
ವಿಳಾಸ: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ,
ಕೆನರಾ ಬ್ಯಾಂಕ್ ಪ್ರ್ರಧಾನ ಕಛೇರಿ (ಅನೆಕ್ಸ್) ಸಂಕೀರ್ಣ,
ಮಣಿಪಾಲ – 576104